ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಶುನಕಕ್ಕೆ ಶುಕ್ರದೆಸೆ

Last Updated 31 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

‘ಗೇಟಿಗೊಂದು ನಾಯಿ ಚಿತ್ರ ಹಾಕಿ, ‘ನಾಯಿ ಇದೆ ಎಚ್ಚರಿಕೆ’ ಅಂತಾ ಬೋರ್ಡ್ ತಗಲಹಾಕೋದು ಈಗ ಕಡಿಮೆಯಾಗಿಬಿಟ್ಟಿದೆ- ಕ್ಯಾಮೆರಾ ಬಂದಿವೆ ಯಲ್ಲ! ನಾಯಿ ಬೆಲೆ ಕಡಿಮೆಯಾಗಿಬಿಟ್ಟದೆ, ನಾಯಿಗಳದು ನಾಯಿ ಪಾಡು!’

‘ಏನಿಲ್ಲ; ಇಲ್ಲಿ ನೋಡಿ ನ್ಯೂಸು, ಉತ್ತರಪ್ರದೇಶ- ನೊಯಿಡಾದಲ್ಲಿ ನಾಯಿ ಮಾಲೀಕನನ್ನ ಕಿಡ್ನಾಪ್ ಮಾಡಿ...’

‘ಎಷ್ಟು ಲಕ್ಷ, ಕೋಟಿ, ಕಾರು,ಕೇಳೀದಾರಂತೆ?’

‘ಲಕ್ಷಾನೂ ಇಲ್ಲ, ಕೋಟೀನೂ ಇಲ್ಲ, ಮಾಲೀಕನನ್ನ ಬಿಡಬೇಕೂ ಅಂತಂದ್ರೆ, ನಿಮ್ಮ ಮನೇಲಿರೋ ವಿದೇಶಿ ನಾಯಿ ತಂದ್ಕೊಡಿ ಅಂತಾ ಬೇಡಿಕೆ ಇಟ್ಟಿದಾರಂತೆ!’

‘ಹೋ! ರಿವರ್ಸ್‌ ಸ್ವೀಪ್! ಉಲ್ಟಾ-ಪಲ್ಟಾ! ಮಾಲೀಕನಿಗಿಂತಾ ನಾಯಿಗೇ ಡಿಮ್ಯಾಂಡೋ?!’

‘ಇನ್ನೂ ಕೇಳಿ, ಅಲ್ಲಿ ಈಗ ವಿದೇಶಿ- ತಳಿ- ನಾಯಿಗಳನ್ನ ಸಾಕೋ ಖಯಾಲಿ ಜಾಸ್ತಿ ಆಗಿದೆ ಯಂತೆ. ಈ ಮಾಲೀಕನೂ ರಾಟ್‌ವೀಲರ್‌, ಮತ್ತೆ ಅರ್ಜೆಂಟಿನೊ ಅಂತ ಎರಡು ಫಾರಿನ್ ಡಾಗ್ ಸಾಕಿದ್ದನಂತೆ, ಅದರಲ್ಲಿ ಅರ್ಜೆಂಟಿನೊ ಬಲೇ ಮುದ್ದಾಗಿ, ಕ್ಯೂಟಾಗಿ ಇತ್ತಂತೆ, ಅದಕ್ಕೇ ಅದರ ಮೇಲೇ ಕಣ್ಣು; ಎಗರಿಸ್ಕೊಂಡು ಹೋಗಿಬಿಟ್ಟಿದ್ದಾ ರಂತೆ’.

‘ಅಂತೂ ಈಗ, ಅರ್ಜೆಂಟೀನಾಗೂ- ಅರ್ಜೆಂಟಿನೊಗೂ ಶುಕ್ರದೆಸೆ!’

‘ಓ! ನೀವು ಫುಟ್ಬಾಲನ್ನೂ ಎಳೆದು ತಂದ್ಬಿಟ್ರಾ?!- ಮೊದಲು ಈ ಶುನಕದ ಶುಕ್ರದೆಸೆ ಬಗ್ಗೆ ಮಾತಾಡಿ...’

‘777 ಚಾರ್ಲಿ ಸಿನಿಮಾ ಬಂದ ಮೇಲೆ ಶ್ವಾನಗಳಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡು’.

‘ಬರಿ ಸಿನಿಮಾ ಅಲ್ಲಾರೀ.. ಸದನಕ್ಕೂ ತಲುಪಿದೆ; ರಾಜ್ಯಸಭೆಯಲ್ಲಿ ಕೋಲಾಹಲ; ಕಲಾಪದಲ್ಲಿ ‘ನಾಯಿ ಗಲಾಟೆ’ ಅಂತಾ ನೋಡ್ಲಿ ಲ್ಲವೇ?!... ಬ್ರೇಕಿಂಗ್ ನ್ಯೂಸ್ ಅಂತಾ... ಟಿ.ವಿ. ಬ್ರೇಕ್ ಆಗೋಹಾಗೆ ಕಿರ್ಚಾತಾಯಿದ್ದದ್ದು ಕೇಳಿಸಿ ಕೊಂಡಿಲ್ವೇ?’

‘ಇಲ್ಲಿ ನಮ್ಮ ಸುವರ್ಣಸೌಧದಲ್ಲಿ ಫೋಟೊ- ಫೈಟ್! ಅವರ ಚಿತ್ರ ಇರಲಿ, ಇವರ ಚಿತ್ರ ಇರಲಿ ಅಂತಾ ಏನು ವಿಚಿತ್ರಾರೀ ಇದು?! ರೈತರು, ರಸ್ತೆಗಳು, ಬೆಳೆಗಳು, ಬೆಲೆಗಳು, ಗ್ಯಾಸ್ ಸಿಲೆಂಡರು ಅಂತಾ ಚರ್ಚೆ ಮಾಡೋದು ಬಿಟ್ಟು’.

‘ಮನುಷ್ಯರಿಗೆ ಇಲ್ಲದೇ ಇರೋ ಬೆಲೆ ಪ್ರಾಣಿ (ನಾಯಿ)ಗಳಿಗಿದೆ ಅಂತಾ ಆ ಕಿಡ್ನಾಪರ್‌ಗಳಿಗೆ ಇರುವಷ್ಟು ಬುದ್ಧಿ ನಮಗಿಲ್ಲದೇ ಇರೋ ಅಷ್ಟು ‘ಕಿಡ್’ಗಳು- ನಾವು?!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT