ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 17–10–1968

Last Updated 16 ಅಕ್ಟೋಬರ್ 2018, 17:08 IST
ಅಕ್ಷರ ಗಾತ್ರ

ಭಾರತೀಯ ವಿಜ್ಞಾನಿಗೆ ನೊಬೆಲ್ ಪ್ರಶಸ್ತಿ

ಸ್ಟಾಕ್‌ಹೋಮ್, ಅ. 16– ಜೀವನ ಸ್ವರೂಪವನ್ನೇ ಅರಿಯಲು ಮಾರ್ಗದರ್ಶಿಯಾದ ಚಿರಿತ್ರಾರ್ಹ ಅಧ್ಯಯನಗಳಿಗಾಗಿ ಮೂವರು ಅಮೆರಿಕದ ವಿಜ್ಞಾನಿಗಳು– ಅವರಲ್ಲಿ ಒಬ್ಬರು ಭಾರತದಲ್ಲಿ ಜನ್ಮತಳೆದವರು– ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಭಾರತೀಯ ವಿಜ್ಞಾನಿ ಹರಗೋವಿಂದ ಖೊರಾನಾ, ಮೇರಿಲ್ಯಾಂಡಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ಮಾರ್ಷಲ್ ವಾರೆನ್ ನಿರೆನ್‌ಬರ್ಗ್ ಮತ್ತು ಕಾರ‍್ನೆಲ್ ವಿಶ್ವವಿದ್ಯಾಲಯದ ರಾಬರ್ಟ್ ವಿಲಿಯಂ ಹೊಲ್ಲೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಸಿಂಹಳದಲ್ಲಿ ಕಾರ್ಖಾನೆ ಸ್ಥಾಪನೆಗೆ ಎಚ್.ಎಂ.ಟಿ. ಯತ್ನ

ನವದೆಹಲಿ, ಅ. 16– ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಕಾರ್ಖಾನೆ ಸಿಂಹಳದಲ್ಲಿ ಮೆಷಿನ್ ಟೂಲ್ಸ್ ತಯಾರಿಕೆ ಕಾರ್ಖಾನೆಯನ್ನು ಸ್ಥಾಪಿಸುವ ಯೋಜನೆ ಹೊಂದಿದೆ ಎಂದು ಕೊಲಂಬೋದಿಂದ ಇಂದು ರಾತ್ರಿ ವಾಪಸಾದ ಕೇಂದ್ರ ಕೈಗಾರಿಕೆ ಅಭಿವೃದ್ಧಿ ಶಾಖೆ ಸಚಿವ ಫಕ್ರುದ್ದಿನ್ ಆಲಿ ಅಹಮದ್ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಗಳ ಲಾಟರಿ ರಾಜ್ಯಾಂಗ ವಿರುದ್ಧ: ಕಾನೂನು ಶಾಖೆ ದೃಷ್ಟಿ

ನವದೆಹಲಿ, ಅ. 16– ರಾಜ್ಯ ಸರ್ಕಾರಗಳು ಲಾಟರಿಗಳನ್ನು ನಡೆಸುವುದು ಸಂವಿಧಾನಕ್ಕೆ ವಿರೋಧವೆಂದು ಕೇಂದ್ರ ಕಾನೂನು ಸಚಿವ ಶಾಖೆಯು ಗೃಹ ಸಚಿವ ಶಾಖೆಗೆ ತಿಳಿದಿದೆ.

ಕೇವಲ 3 ಸಾವಿರ ಅಡಿ ಅಂತರ

ಬೆಂಗಳೂರು, ಅ. 16– ಫ್ಲೂ ಖಾಯಿಲೆಗೂ, ಬೆಂಗಳೂರಿನ ಜನರಿಗೂ 3,000 ಅಡಿಗಳ ಅಂತರ.

ಮದ್ರಾಸಿನಲ್ಲಿ ಆದಂತೆ ಫ್ಲೂ, ಬೆಂಗಳೂರಿನಲ್ಲೂ ವ್ಯಾಪಕ ಅಂಟುಜಾಡ್ಯವಾಗಿ ಹರಡದಿರುವುದಕ್ಕೆ, ಬೆಂಗಳೂರು ಸಮುದ್ರ ಮಟ್ಟದಿಂದ 3,000 ಅಡಿಗಳ ಎತ್ತರದಲ್ಲಿರುವುದು ಮುಖ್ಯ ಕಾರಣ.

‘ಗೂಂಡಾಗಳಿಂದ ರಕ್ಷಿಸಿ’– ಹಣ್ಣು ದಳ್ಳಾಳಿಗಳ ಮೊರೆ

ಬೆಂಗಳೂರು, ಅ. 16– ‘ಗೂಂಡಾಗಳು ಮತ್ತು ಸಮಾಜಘಾತುಕರಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ’.

ರಾಜ್ಯದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ ಮತ್ತು ಬೆಂಗಳೂರು ನಗರದ ಪೊಲೀಸ್‌ ಕಮಿಷನರ್‌ ಅವರಲ್ಲಿ ಹಣ್ಣು ದಳ್ಳಾಳಿಗಳ ಸಂಘದವರ ಮೊರೆಯಿದು.

ಇಡೀ ವರ್ಷ ಜಮೀನಿನಲ್ಲಿ ಬೆವರು ಹರಿಸುವ ರೈತರಿಗೂ ಸಾವಿರಾರು ರೂಪಾಯಿ ಹಣವನ್ನು ಸುರಿಯುವ ವ್ಯಾಪಾರಸ್ಥರಿಗೂ ಗೂಂಡಾಗಳು ಮತ್ತು ಸಮಾಜ ಘಾತುಕರಿಂದ ತೊಂದರೆಯಾಗುತ್ತಿದ್ದು, ಸಾವಿರಾರು ರೂಪಾಯಿ ನಷ್ಟವಾಗುತ್ತಿರುವುದನ್ನು ತಪ್ಪಿಸಬೇಕೆಂದು ಕಾನೂನು ಮತ್ತು ಶಾಂತಿಪಾಲನೆ ಇಲಾಖೆಯ ಮುಖ್ಯಾಧಿಕಾರಿಗಳಿಗೆ ಸಂಘದವರು ಕಳಕಳಿಯ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT