ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27.12.1969 ಶನಿವಾರ

50 years back
Last Updated 26 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಸರ್ಕಾರಿ ನೌಕರರಿಗೆ ಹೊಸ ವರ್ಷದ ಬಳುವಳಿ: ತುಕೋಳ್‌ ಶಿಫಾರಸಿಗೆ ಅಸ್ತು

ಬೆಂಗಳೂರು, ಡಿ. 26– ಇಂದು ರಾಜ್ಯದ ಮಂತ್ರಿಮಂಡಲ ಕೈಗೊಂಡ ನಿರ್ಧಾರದ ಫಲವಾಗಿ 3.10 ಲಕ್ಷ ಮಂದಿ ಸರ್ಕಾರಿ ನೌಕರರಿಗೆ ತಿಂಗಳಿಗೆ 10 ರೂಪಾಯಿನಿಂದ 40 ರೂಪಾಯಿಗಳವರೆಗೆ ನೂತನ ವರ್ಷದ ಬಳುವಳಿ ದೊರೆಯಲಿದೆ.

1970ನೇ ಜನವರಿ 1ರಿಂದ ಜಾರಿಗೆ ಬರುವ ಹೊಸ ವೇತನ ಪ್ರಮಾಣಗಳ ಜೊತೆಗೆ ಗ್ರಾಚ್ಯುಟಿ ಹಾಗೂ ವಿಶ್ರಾಂತಿ ವೇತನವನ್ನು ಲೆಕ್ಕ ಹಾಕುವಾಗ, ತುಟ್ಟಿಭತ್ಯದ ಒಂದು ಭಾಗವನ್ನು ‘ವಿಶೇಷ ಮೂಲವೇತನವನ್ನಾಗಿ’ ಪರಿಗಣಿಸಬೇಕೆಂಬ ತುಕೋಳ್ ಆಯೋಗದ ಶಿಫಾರಸನ್ನು ಮಂತ್ರಿಮಂಡಲ ಅಂಗೀಕರಿಸಿದೆ.

ತೆರಿಗೆ ಪರಿಷ್ಕರಣ, ಆಸ್ತಿ ಮೇಲೆ ಮಿತಿಗಳ ಆರ್ಥಿಕ ನಿರ್ಣಯ

ಮುಂಬೈ, ಡಿ. 26– ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಷ್ಕರಿಸುವ ಮತ್ತು ಪಟ್ಟಣಗಳ ಆಸ್ತಿ ಮೇಲೆ ಪರಮಾವಧಿ ಮಿತಿಯನ್ನು ಹೇರುವ ಆರ್ಥಿಕ ನೀತಿ ಕುರಿತ ಕರಡು ನಿರ್ಣಯವೊಂದಕ್ಕೆ ಆಡಳಿತ ಕಾಂಗ್ರೆಸ್ ಕಾರ‍್ಯ ಸಮಿತಿಯು ನಿನ್ನೆ ರಾತ್ರಿ ಒಂದೂವರೆ ಗಂಟೆ ತನಕ ಸಮಾಲೋಚನೆ ನಡೆಸಿ ಅಂತಿಮ ರೂಪು ಕೊಟ್ಟಿತು.

ವಿಷಯ ನಿಯಾಮಕ ಸಮತಿಯ ಅಧ್ಯಯನ ತಂಡವೊಂದು ಅದನ್ನು ಪರಿಶೀಲಿಸುವುದು. ಖಾಸಗಿ ಉದ್ಯಮ ವಲಯದ ವಿಸ್ತರಣೆ, ತತ್‌ಕ್ಷಣ ದೇಶದ ಎಲ್ಲ ಆಮದು ವಹಿವಾಟಿನ ರಾಷ್ಟ್ರೀಕರಣ ಹಾಗೂ ರಫ್ತು ವ್ಯಾಪಾರದ ಕ್ರಮಶಃ ರಾಷ್ಟ್ರೀಕರಣಗಳನ್ನೂ ಕರಡು ನಿರ್ಣಯ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT