ಬುಧವಾರ, 31–7–1968

7

ಬುಧವಾರ, 31–7–1968

Published:
Updated:

ಲಂಡನ್ನಿನಲ್ಲಿ ವಾಣಿಜ್ಯ ಕಚೇರಿ: ಮೈಸೂರಿಗೆ ಮಾತ್ರ ಏಕೆ ಈ ವಿಶೇಷ ಅವಕಾಶ?

ನವದೆಹಲಿ, ಜು. 30– ಲಂಡನ್ನಿನಲ್ಲಿ ಮೈಸೂರು ಸರ್ಕಾರದ ವಾಣಿಜ್ಯ ಪ್ರತಿನಿಧಿ ಕಚೇರಿಯನ್ನು ಮುಂದುವ
ರೆಸುವ ಕ್ರಮದ ರಾಜ್ಯಾಂಗ ಬದ್ಧತೆ ಹಾಗೂ ಪ್ರಸಕ್ತ ಕಾಂಗ್ರೆಸ್ ಅಧ್ಯಕ್ಷರೂ ಮಾಜಿ ಮುಖ್ಯಮಂತ್ರಿಯೂ ಆದ ಶ್ರೀ ಎಸ್. ನಿಜಲಿಂಗಪ್ಪನವರ ಅಳಿಯಂದಿರಲ್ಲೊಬ್ಬರಾದ ಶ್ರೀ ಎಸ್.ಬಿ.
ಮುದ್ದಪ್ಪ ಅವರನ್ನು ಆ ಹುದ್ದೆಗೆ ನೇಮಕ ಮಾಡುವುದರ ಔಚಿತ್ಯದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ತೀವ್ರ ಚರ್ಚೆ ನಡೆದು ಕೋಲಾಹಲವುಂಟಾಯಿತು.

ಇಡೀ ಪ್ರಶ್ನೆ ಪುನರ್ವಿಮರ್ಶೆ: ಮುರಾರಜಿ ಸಲಹೆ

ನವದೆಹಲಿ, ಜು. 30– ಮೈಸೂರು ಸರ್ಕಾರ ಲಂಡನ್ನಿನಲ್ಲಿ ಪ್ರತ್ಯೇಕ ವಾಣಿಜ್ಯ ಪ್ರತಿನಿಧಿಯನ್ನು ನೇಮಿಸಿರುವುದರ ಔಚಿತ್ಯ ಕುರಿತು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಇಂದು ಅಪೂರ್ಣ ಚರ್ಚೆ ನಡೆಯಿತು.

ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾ
ಯದ ಬೆಳಕಿನಲ್ಲಿ ಇಡೀ ಪ್ರಶ್ನೆಯನ್ನು ಸರ್ಕಾರ ಪುನಃ ಪರಿಶೀಲಿಸಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುರಾರಜಿ ದೇಸಾಯಿ ಸಲಹೆ ಮಾಡಿದರು.

ರಾಜ್ಯಕ್ಕೆ ಕರ್ನಾಟಕ ನಾಮಕರಣ ದಿನ ಸನ್ನಿಹಿತ: ವೀರೇಂದ್ರ

ಹುಬ್ಬಳ್ಳಿ, ಜು. 31– ‘ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂಬ ಬೇಡಿಕೆಗೆ ಕೆಲವು ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ವಿರೋಧವಿದ್ದರೂ ಕ್ರಮೇಣವಾಗಿ ದೃಷ್ಟಿ ಬದಲಾವಣೆ ಕಾಣುತ್ತಿದೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡುವ ದಿನ ಸನ್ನಿಹಿತವಾಗಿದೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !