ಶನಿವಾರ, 10–8–1968 / ಉಪಸಚಿವೆ– ಸಚಿವರ ಚಕಮಕಿ

7

ಶನಿವಾರ, 10–8–1968 / ಉಪಸಚಿವೆ– ಸಚಿವರ ಚಕಮಕಿ

Published:
Updated:

ಉಪಸಚಿವೆ– ಸಚಿವರ ಚಕಮಕಿ

ನವದೆಹಲಿ, ಆ. 9– ಇಂದು ಲೋಕಸಭೆಯಲ್ಲೊಂದು ಅಪರೂಪದ ದೃಶ್ಯ. ಸ್ಟೇಟ್‌ ಸಚಿವರು ಮತ್ತು ಉಪಸಚಿವರ ನಡುವೆ ಮಾತಿನ ಚಕಮಕಿ.

ಮಹಾರಾಷ್ಟ್ರ ಸರ್ಕಾರದ ಶಿಫಾರಸಿನ ಪ್ರಕಾರ ಭಾರತವನ್ನು ಬಿಟ್ಟು ಹೊರಡುವಂತೆ ಆಜ್ಞೆ ಜಾರಿ ಮಾಡಲಾದ ಕ್ರೈಸ್ತ ಪಾದ್ರಿ ಫಾದರ್‌ ವಿನ್ಸೆಂಟ್‌ ಫರಾರ್‌ರವರ ವಿರುದ್ಧ ಮಾಡಲಾಗಿರುವ ಆಪಾದನೆಗಳನ್ನು ಕುರಿತು ಎಸ್‌.ಎಸ್‌.ಪಿ ಸದಸ್ಯ ಎಸ್‌.ಎಂ. ಜೋಷಿ ಪ್ರಶ್ನೆ ಹಾಕಿದ್ದರು.

ವಿದೇಶ ಧರ್ಮವೊಂದು ಭಾರತದ ನೆಲದಮೇಲೆ ಬೆಳೆಯಲು, ಅಭಿವೃದ್ಧಿಗೊಳ್ಳಲು ಸರ್ಕಾರವು ಸಾಮಾಜಿಕ ಅಭಿವೃದ್ಧಿಗಾಗಿ ನೀಡುವ ಹಣವನ್ನು ಬಳಸಲು ಅವಕಾಶ ಕೊಡಬೇಕೆ? ಎಂದು ಕಾಂಗ್ರೆಸ್‌ ಸದಸ್ಯ ಕಾರ್ತಿಕ್‌ ಒರಾನ್‌ ಪ್ರಶ್ನಿಸಿದರು.

ಹಿಂದಿನ ಹೇಳಿಕೆ ತಪ್ಪೆಂದು ಮುರಾರಜಿ ಸ್ಪಷ್ಟನೆ ಸಂಭವ: ಸಂಸತ್ತಿನ ಕ್ಷಮೆ ಕೇಳಲೂ ಸಿದ್ಧ

ನವದೆಹಲಿ, ಆ. 9– ತಮ್ಮ ಮಗ ಕಾಂತಿಲಾಲ್‌ ದೇಸಾಯಿ ಕೆಲವು ವಾಣಿಜ್ಯ ಸಂಸ್ಥೆಗಳ ಜೊತೆ ಹೊಂದಿರುವ ಸಂಬಂಧದ ಬಗೆಗೆ ತಾವು ಇತ್ತೀಚೆಗೆ ಪಾರ್ಲಿಮೆಂಟಿನಲ್ಲಿ ನೀಡಿದ ಹೇಳಿಕೆಗಳು ಕೆಲವು ವಿಚಾರಗಳಲ್ಲಿ ತಪ್ಪಾದುದೆಂದು ತಿಳಿಸಿ ಉಪಪ್ರಧಾನಿ ಮುರಾರಜಿ ದೇಸಾಯಿರವರು ಪಾರ್ಲಿಮೆಂಟಿನ ಉಭಯಸದನಗಳಲ್ಲೂ ಸೋಮವಾರ ಹೇಳಿಕೆ ನೀಡುವ ನಿರೀಕ್ಷೆಯಿದೆ.

1964ರಲ್ಲಿ ತಮ್ಮ ಆಪ್ತ ಕಾರ್ಯದರ್ಶಿಯಾದಾಗಿನಿಂದ ತಮ್ಮ ಮಗ ವಾಣಿಜ್ಯ ಸಂಸ್ಥೆಗಳ ಜೊತೆ ಸಂಪರ್ಕ ತ್ಯಜಿಸಿದರೆಂದು ಮುರಾರಜಿ ಕಳೆದ ಬಜೆಟ್‌ ಅಧಿವೇಶನದಲ್ಲಿ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !