ಸೋಮವಾರ 16–9–1968

7

ಸೋಮವಾರ 16–9–1968

Published:
Updated:

ಮುಷ್ಕರಕ್ಕೆ ಸೇರಿದರೆ ಹಿಂದಿನ ಸೇವೆಯ ನಷ್ಟ: ಸರ್ಕಾರ ಎಚ್ಚರಿಕೆ

ನವದೆಹಲಿ, ಸೆ. 15– ಕೆಲಸದಿಂದ ಸೆಪ್ಟೆಂಬರ್‌ 19ರಂದು ಗೈರು ಹಾಜರಾಗುವುದು ಸೇವಾವಧಿ ಭಗ್ನವಾದಂತಾಗುವುದರಿಂದ ಆ ದಿನ ಮುಷ್ಕರದಲ್ಲಿ ಭಾಗವಹಿಸುವ ಎಲ್ಲ ಕೇಂದ್ರ ಸರ್ಕಾರಿ ನೌಕರರು ಹಿಂದೆ ಸಲ್ಲಿಸಿದ ಸೇವೆಯ ನಷ್ಟ ಅನುಭವಿಸುವರೆಂದು ಕೇಂದ್ರ ಸರ್ಕಾರ ಇಂದು ತನ್ನ ನೌಕರರಿಗೆ ಎಚ್ಚರಿಕೆ ನೀಡಿದೆ.

ಮುಷ್ಕರವನ್ನು ಸರ್ಕಾರ ತೀವ್ರವಾಗಿ ಗಮನಿಸಿದ್ದು ಮುಷ್ಕರದಲ್ಲಿ ಭಾಗವಹಿಸುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕೊನೇಗಳಿಗೆ ಮಾತುಕತೆ ವಿಫಲ

ನವದೆಹಲಿ, ಸೆ.15– ತಮ್ಮ ಬೇಡಿಕೆಗಳ ಸಂಬಂಧ ಒಡಂಬಡಿಕೆಗೆ ಬರಲು ಕೇಂದ್ರ ಸರ್ಕಾರಿ ನೌಕರರು ಇಂದು ನಡೆಸಿದ ಕೊನೇಗಳಿಗೆ ಪ್ರಯತ್ನ ವಿಫಲಗೊಂಡಿದೆ.

ಕೆಂದ್ರ ನೌಕರರ ಜಂಟೀ ಕ್ರಿಯಾಮಿತಿಯ ಕಾರ್ಯದರ್ಶಿ ಪೀಟರ್‌ ಆಳ್ವರಿಸ್‌ರವರು ಇಂದು ಇಲ್ಲಿ ಸುದ್ದಿಗಾರರಿಗೆ ಈ ವಿಚಾರವನ್ನು ತಿಳಿಸಿದರು.

ಸುಗ್ರೀವಾಜ್ಞೆಗೆ ಲಿಮಯೆ ಖಂಡನೆ

ದೇವಗಢ (ಬಿಹಾರ್‌) ಸೆ. 15– ಕೇಂದ್ರ ಸರ್ಕಾರಿ ನೌಕರರ ಮುಷ್ಕರ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಎಸ್‌ಎಸ್‌ಪಿ ನಾಯಕ ಮಧು ಲಿಮಯೆ ಇಂದು ಇಲ್ಲಿ ಟೀಕಿಸಿದರು.

ಪತ್ರಿಕಾ ನೌಕರರ ಬೇಡಿಕೆ ಪಂಚಾಯ್ತಿಗೆ: ಹಾಥಿ ಭರವಸೆ

ನವದೆಹಲಿ, ಸೆ. 15– ವೃತ್ತಪತ್ರಿಕೆ ಮುಷ್ಕರ ಇತ್ಯರ್ಥ ಅಸಾಧ್ಯವಾದರೆ ಕಾರ್ಮಿಕರಿಗೆ ಕನಿಷ್ಠ ರಕ್ಷಣೆ ನೀಡುವ ಆಧಾರದಮೇಲೆ ಈ ಪ್ರಶ್ನೆಯನ್ನು ಪಂಚಾಯ್ತಿಗೆ ತಾವು ಒಪ್ಪಿಸುವುದಾಗಿ ಮುಷ್ಕರದ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿರುವ ಕೆಂದ್ರ ಕಾರ್ಮಿಕ ಸಚಿವ ಜೆ.ಎಲ್‌. ಹಾಥಿ ಇಂದು ತಿಳಿಸಿದರು.

ಪೂರ್ಣ ಇತ್ಯರ್ಥಕ್ಕೆ ಹೆಚ್ಚಿನ ಅವಕಾಶ ಇದ್ದಂತೆ ಕಂಡುಬರುತ್ತಿಲ್ಲವಾದರೂ ಕಾರ್ಮಿಕರ ಪ್ರಸ್ತುತ ವೇತನ ಹಾಗೂ ವೇತನ ಮಂಡಳಿ ಶಿಫಾರಸು ಮಾಡಿದ ವೇತನದ ವ್ಯತ್ಯಾಸದಲ್ಲಿರುವ ಶೇಕಡ 75ರಷ್ಟನ್ನು ಕಾರ್ಮಿಕರು ಪಡೆಯುವಂತೆ ತಾವು ಪ್ರಯತ್ನಿಸುವುದಾಗಿ ಅವರು ಹೇಳಿದರು.

ಮುದ್ದೇನಹಳ್ಳಿಯ ದತ್ತು: ಅಭಿವೃದ್ಧಿಗೆ ಸಂಸ್ಥೆಗಳ ಸಂಕಲ್ಪ

ಬೆಂಗಳೂರು, ಸೆ.15– ಸರ್ ಎಂ. ವಿಶ್ವೇಶ್ವರಯ್ಯ ಅವರು ಜನಿಸಿದ, ಮುದ್ದೇನಹಳ್ಳಿಯನ್ನು ‘ದತ್ತು ಸ್ವೀಕರಿಸಿ’ ಅದನ್ನು ಅವರ ಹೆಸರಿನಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯಕ್ರಮವನ್ನು ನಗರದ ಪ್ರಮುಖ ಕೈಗಾರಿಕಾ ಹಾಗೂ ಆರ್ಥಿಕ ಸಂಸ್ಥೆಗಳು ಹಾಕಿಕೊಂಡಿವೆ.

ಕಾರ್ಪೊರೇಷನ್‌ ಆಗಿ ಮೈಸೂರು ಪುರಸಭೆ ಪರಿವರ್ತನೆ ಸಾಧ್ಯವಿಲ್ಲ: ಕೆ. ಪುಟ್ಟಸ್ವಾಮಿ

ಮೈಸೂರು, ಸೆ. 15– ‘ತಾವು ಎಷ್ಟೇ ತ್ವರಿತವಾಗಿ ಕ್ರಮ ಕೈಗೊಂಡರೂ ಮೈಸೂರು ‍ಪುರಸಭೆಯನ್ನು ಇನ್ನೊಂದು ವರ್ಷಕ್ಕೆ ಮುಂಚೆ ಕಾರ್ಪೊರೇಷನ್‌ ಆಗಿ ಪರಿವರ್ತಿಸಲು ಸಾಧ್ಯವಿಲ್ಲ’ ಎಂದು ಪೌರಾಡಳಿತ ಸಚಿವ ಶ್ರೀ ಕೆ. ಪುಟ್ಟಸ್ವಾಮಿ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !