ಶುಕ್ರವಾರ, 4–10–1968

7

ಶುಕ್ರವಾರ, 4–10–1968

Published:
Updated:

ಬೆಳಗಾವಿಯಲ್ಲಿ ಚವಾಣ್ ಕಾರಿಗೆ ಕಲ್ಲಿನೇಟು: ಉದ್ರಿಕ್ತ ವರ್ತನೆ

ಬೆಳಗಾವಿ, ಅ. 3– ಇಂದು ಬೆಳಿಗ್ಗೆ ಇಲ್ಲಿ ಕೇಂದ್ರ ಗೃಹಸಚಿವ ಶ್ರೀ ಯಶವಂತರಾವ್ ಚವಾಣ್ ಅವರಿದ್ದ ಕಾರಿಗೆ ಮಹಾರಾಷ್ಟ್ರ ಪರ ಪ್ರದರ್ಶನಕಾರರು ಕಲ್ಲುಗಳನ್ನೂ, ಚಪ್ಪಲಿಗಳನ್ನೂ ಎಸೆದರು. ಶ್ರೀ ಚವಾಣ್ ಅವರು ಗಾಯಗೊಳ್ಳದೆ ಪಾರಾದರು. ಆದರೆ ಕಾರಿನಲ್ಲಿದ್ದ ಡಿ.ಐ.ಜಿ. ಶ್ರೀ ಪಿ.ಜೆ. ಲೂಯಿಸ್‌ ಅವರಿಗೆ ಸಣ್ಣಪುಟ್ಟ ಗಾಯಗಳಾದವು.

ಚುನಾವಣೆ ಪಂಚಶೀಲ

ನವದೆಹಲಿ, ಅ. 3– ಮುಂದಿನ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗಾಗಿ ಚುನಾವಣಾ ಆಯೋಗವು ಇಂದು ಐದು ಅಂಶಗಳ ‘ಕನಿಷ್ಠ ಸಂಹಿತೆ’ಯೊಂದನ್ನು ‍ಪ್ರಕಟಿಸಿದೆ.

ಈ ಸಂಹಿತೆ ಪಾಲಿಸಿದರೆ ಸ್ವತಂತ್ರ ಮತ್ತು ನ್ಯಾಯಸಮ್ಮತ ಮತದಾನ ಸಾಧ್ಯವಾಗುವುದಲ್ಲದೆ ಚುನಾವಣಾ ತಕರಾರುಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಅಕ್ರಮವೆಂದು ಘೋಷಿಸಲ್ಪಡುವ ಸಾಧ್ಯತೆಗಳೂ ಕಡಿಮೆಯಾಗುವುದೆಂದು ಪ್ರಧಾನ ಚುನಾವಣಾ ಕಮೀಷನರ್ ಶ್ರೀ ಎಸ್.ಪಿ. ಸೇನ್ ವರ್ಮಾ ಅವರು ಪತ್ರಕರ್ತರಿಗೆ ತಿಳಿಸಿದರು.

ಒಲಿಂಪಿಕ್ ಕ್ರೀಡೆಗಳ ಗತಿ?

ಮೆಕ್ಸಿಕೋನಗರ, ಅ. 3– ನಿನ್ನೆ ರಾತ್ರಿ ಇಲ್ಲಿ 25 ಜನರ ಸಾವಿಗೆ ಕಾರಣವಾದ ಇಲ್ಲಿನ ಸರಕಾರಿ ವಿರೋಧಿ ಗಲಭೆಗಳಿಂದ ಒಲಿಂಪಿಕ್ ಪಂದ್ಯಗಳು ನಡೆಯುವ ಸಾಧ್ಯತೆ ಅನಿಶ್ಚಿತಗೊಂಡಂತಾಗಿದೆ.

ಒಲಿಂಪಿಕ್ ಪಂದ್ಯಗಳು ನಡೆಯುವವೆಂದು ಸರಕಾರಿ ವಕ್ತಾರರು ದೃಢವಾಗಿ ಹೇಳಿದರು. ಆದರೆ ರಸ್ತೆಗಳಲ್ಲಿ ಹೋರಾಟ ಸಂಭವಿಸಿದ ವರದಿಗಳಿಂದ ಒಲಿಂಪಿಕ್ ಅಧಿಕಾರಿಗಳು ಗಾಬರಿಗೊಂಡಿದ್ದಾರೆ.

ಪೆರುವಿನಲ್ಲಿ ಸೇನಾಕ್ರಾಂತಿ: ಅಧ್ಯಕ್ಷರ ಪದಚ್ಯುತಿ

ಲಿಮ, ಅ. 3– ಪೆರುವಿನಲ್ಲಿ ಇಂದು ಸೇನಾಕ್ರಾಂತಿ ನಡೆದು, ಅಧ್ಯಕ್ಷ ಫರ್ನಾಂಡೊ ಬೆಲೂಂಡಿ ಟೆರ್‍ರಿಅವರು ಪದಚ್ಯುತಿಗೊಂಡರೆಂದು ಪ್ರಕಟಿಸಲಾಗಿದೆ.

ಇಂದು ಸೂರ್ಯೋದಯಕ್ಕೆ ಮುಂಚಿತವಾಗಿಯೇ ಲಿಮ ಸುತ್ತಮುತ್ತ ಟ್ಯಾಂಕುಗಳು ಮತ್ತು ಸೇನಾ ಪಡೆಗಳು ಸಜ್ಜಾಗಿ ನಿಂತಿದ್ದವು. 55 ವರ್ಷದ ಅಧ್ಯಕ್ಷರನ್ನು ಸರ್ಕಾರಿ ಅರಮನೆಯಿಂದ ಜೀಪಿನಲ್ಲಿ ಸರ್ಕಾರಿ ಅಧಿಕಾರಿಗಳ ಕಾವಲಿನೊಡನೆ ಬೇರೆಡೆಗೆ ಕರೆದೊಯ್ಯಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !