ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಠ ವಿವಾದ; ಸಾವಳಗಿ ಸ್ವಾಮೀಜಿ ರಾಜೀನಾಮೆ

Published 26 ಮಾರ್ಚ್ 2024, 2:18 IST
Last Updated 26 ಮಾರ್ಚ್ 2024, 2:18 IST
ಅಕ್ಷರ ಗಾತ್ರ

ಮಠ ವಿವಾದ: ಸಾವಳಗಿ ಸ್ವಾಮೀಜಿ ರಾಜೀನಾಮೆ

ಹುಬ್ಬಳ್ಳಿ, ಮಾರ್ಚ್ 25– ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಇತ್ಯರ್ಥ ಕ್ಕಾಗಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ರಚಿಸಲಾಗಿರುವ ಪಂಚ ಮಠಾಧೀಶ ಸಮಿತಿಗೆ ರಾಜೀನಾಮೆ ನೀಡಿರುವುದಾಗಿ ಸಮಿತಿಯ ಇನ್ನೊಬ್ಬ ಸದಸ್ಯ ಸಾವಳಗಿ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಅವರು ಇಂದು ಪ್ರಕಟಿಸಿದ್ದಾರೆ.

ಇದೇ ವೇಳೆಗೆ ರುದ್ರಮುನಿ ದೇವರು ಅವರ ಬೆಂಬಲಿಗರು, ಪಂಚ ಮಠಾಧೀಶ ಸಮಿತಿಯು ಮಾರ್ಚ್ 27ರಂದು ಬೆಂಗಳೂರಿನಲ್ಲಿ ಸಭೆ ನಡೆಸಬಾರದು ಎಂದು ಆಗ್ರಹಿಸಿ ಹುಬ್ಬಳ್ಳಿ– ಧಾರವಾಡ ಲಿಂಗಾಯತ ಸಮಿತಿ (ಕೇಶ್ವಾಪೂರ) ಆಶ್ರಯದಲ್ಲಿ ಇಂದು ಇಲ್ಲಿ ರಸ್ತೆತಡೆ ಹಾಗೂ ಧರಣಿ ನಡೆಸಿದರು.

ಈ ಬೆಳವಣಿಗೆಗಳಿಂದಾಗಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದವು ಕುತೂಹಲಕರ ತಿರುವು ಪಡೆದುಕೊಂಡಿದೆ.

ಪರೀಕ್ಷೆ ನಕಲಿಗೆ ನೆರವು,
ಲಘು ಲಾಠಿಪ್ರಹಾರ

ಕಲ್ಬುರ್ಗಿ, ಮಾರ್ಚ್ 25– ಇಲ್ಲಿನ ಐವಾನ್–
ಇ–ಶಾಹಿ ಪ್ರದೇಶದಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದವರ ಮೇಲೆ ಪೊಲೀಸರು ಇಂದು ಬೆಳಿಗ್ಗೆ ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದರು.

ಭಾರಿ ಪ್ರಮಾಣದಲ್ಲಿ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಬಹಿರಂಗದ ಪ್ರಕರಣ ಈ ಪ್ರದೇಶದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತೆಂದು ಆರೋಪಿಸಲಾಗಿದೆ. ನಕಲು ಮಾಡುತ್ತಿದ್ದ ಏಳು ಮಂದಿಯನ್ನು ಡಿಬಾರ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT