ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ ಈ ದಿನ: ದೇವೇಗೌಡ–ಸೋನಿಯಾ ಭೇಟಿ

Published 12 ಡಿಸೆಂಬರ್ 2023, 19:13 IST
Last Updated 12 ಡಿಸೆಂಬರ್ 2023, 19:13 IST
ಅಕ್ಷರ ಗಾತ್ರ

ವದಂತಿಗಳಿಗೆ ರೆಕ್ಕೆಪುಕ್ಕ ಮೂಡಿಸಿರುವ ಭೇಟಿ

ಬೆಂಗಳೂರು, ಡಿ. 12– ಜನತಾದಳದ ರಾಷ್ಟ್ರೀಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪರಸ್ಪರ ಮನೆಗಳಿಗೆ ಭೇಟಿ ನೀಡಿ ‘ಮುಖಾಮುಖಿ’ ಮಾತುಕತೆ ನಡೆಸಿರುವುದು ರಾಜ್ಯಮಟ್ಟದಲ್ಲಿ ಎರಡೂ ಪಕ್ಷಗಳಲ್ಲಿ ಗೊಂದಲ ಮತ್ತು ಸ್ಥಳೀಯ ನಾಯಕರಿಗೆ ಮುಜುಗರ ಉಂಟುಮಾಡಿದೆ.

ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಗೌಡರು ಒಂದು ರೀತಿಯಲ್ಲಿ ‘ಪಿವಿಎನ್‌’ ಅವರನ್ನು ಗುರುವಿನಂತೆ ಆರಾಧಿಸುತ್ತಾ ಸಲಹೆ–ಸೂಚನೆ ಪಡೆಯುತ್ತಿದ್ದುದು ಗುಟ್ಟೇನಲ್ಲ. ಆದರೆ, ಸೀತಾರಾಂ ಅವರು ಎಐಸಿಸಿ ಅಧ್ಯಕ್ಷರಾದ ಮೇಲೂ
ಗೌಡರ–ಪಿವಿಎನ್‌ ಸಂಬಂಧ ಮುಂದುವರಿದಂತೆ ಗೌಡರು–ಕೇಸರಿ ಸಂಬಂಧ ಹಳಸತೊಡಗಿ, ದಿನಕಳೆದಂತೆ ಇವರಿಬ್ಬರ ನಡುವಿನ ಶೀತಲ ಸಮರಬೀದಿಕಾಳಗವಾಯಿತು.

ಕೊನೆಗೆ ಸವಾಲು– ಪ್ರತಿ ಸವಾಲಿನ ಮಟ್ಟಕ್ಕೆ ಹೋಗಿ, ಕೇಂದ್ರದ ಸಂಯುಕ್ತರಂಗ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿದ್ದ ಕಾಂಗ್ರೆಸ್ ದಿಢೀರ್‌ ತನ್ನ ನಿಲುವನ್ನು ಬದಲಿಸಿದ ಕಾರಣ, ಸರ್ಕಾರ ಪತನಗೊಂಡಿದ್ದು ಇತಿಹಾಸದ ಪುಟ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT