ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ ಈ ದಿನ: ದಳ ಬಿಕ್ಕಟ್ಟಿಗೆ ತೆರೆ– ಪಟೇಲ್ ಮುಂದುವರಿಕೆ

25 ವರ್ಷಗಳ ಹಿಂದೆ ಈ ದಿನ
Published 12 ಜನವರಿ 2024, 19:28 IST
Last Updated 12 ಜನವರಿ 2024, 19:28 IST
ಅಕ್ಷರ ಗಾತ್ರ

ದಳ ಬಿಕ್ಕಟ್ಟಿಗೆ ತೆರೆ– ಪಟೇಲ್ ಮುಂದುವರಿಕೆ

ನವದೆಹಲಿ, ಜ. 12– ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನಾಯಕತ್ವದಲ್ಲಿ ಮುಂದುವರಿಕೆ. ಜನತಾದಳದ ಅಧ್ಯಕ್ಷ ಬಿ.ಎಲ್. ಶಂಕರ್‌ಗೆ ಕೊಕ್. ಉಪಮುಖ್ಯಮಂತ್ರಿ ಸ್ಥಾನದ ಜತೆಗೆ ಸಿದ್ದರಾಮಯ್ಯ ಅವರಿಗೆ ರಾಜ್ಯ ಜನತಾದಳದ ಅಧ್ಯಕ್ಷ ಸ್ಥಾನದ ಹೆಚ್ಚಿನ ಹೊಣೆಗಾರಿಕೆ ಹಾಗೂ ಸಂಪುಟ ಪುನರ್‌ರಚನೆ.

–ಆಡಳಿತಾರೂಢ ಜನತಾದಳದ ಮೂರು ತಿಂಗಳ ಬಿಕ್ಕಟ್ಟಿಗೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಇಂದು ಕೈಗೊಂಡ ಒಮ್ಮತದ ತೀರ್ಮಾನಗಳಿವು. 

ಸಂಪುಟ ಪುನರ್‌ರಚನೆ ಬಗೆಗೆ ಮುಖ್ಯಮಂತ್ರಿ ಅವರಿಗೆ ಪೂರ್ಣ ಅಧಿಕಾರ ಇದ್ದರೂ, ದಳದ ನಾಯಕರಾದ ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಅವರೊಡನೆ ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಪಟೇಲ್ ಅವರಿಗೆ ಸಲಹೆ ಮಾಡಿರುವುದಾಗಿ ದಳದ ಅಧ್ಯಕ್ಷ ಶರದ್ ಯಾದವ್ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.  

‘ಪಕ್ಷ ಅಧಿಕಾರಕ್ಕೆ ತರುವ ಗುರಿ’

ನವದೆಹಲಿ, ಜ. 12– ‘ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಮುಂದಿರುವ ತುರ್ತು ಕೆಲಸ ಮತ್ತು ಗುರಿ’.

ಉಪಮುಖ್ಯಮಂತ್ರಿ ಸ್ಥಾನದ ಜತೆಗೆ, ಚುನಾವಣೆ ಹತ್ತಿರವಾಗುತ್ತಿರುವ ದಿನಗಳಲ್ಲಿ ಜನತಾದಳದ ನೂತನ ಅಧ್ಯಕ್ಷರಾಗಿ ಇಂದು ನೇಮಕಗೊಂಡ, ಐವತ್ತು ವರ್ಷ ದಾಟಿರುವ ಸಿದ್ದರಾಮಯ್ಯ ಅವರ ಗುರಿಯಿದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT