ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಈ ದಿನ: ಜಾವಗಲ್ ಶ್ರೀನಾಥ್ ಪ್ರಚಂಡ ಬೌಲಿಂಗ್

25 ವರ್ಷಗಳ ಹಿಂದೆ ಈ ದಿನ: ಜಾವಗಲ್ ಶ್ರೀನಾಥ್ ಪ್ರಚಂಡ ಬೌಲಿಂಗ್
Published 18 ಫೆಬ್ರುವರಿ 2024, 19:20 IST
Last Updated 18 ಫೆಬ್ರುವರಿ 2024, 19:20 IST
ಅಕ್ಷರ ಗಾತ್ರ

ಶ್ರೀನಾಥ್ ಪ್ರಚಂಡ ಬೌಲಿಂಗ್

ಕಲ್ಕತ್ತ, ಫೆ. 18– ಕಳೆದ ವಾರ ಅನಿಲ್ ಕುಂಬ್ಳೆ ಅವರ, ವಿಶ್ವವನ್ನೇ ನಿಬ್ಬೆರಗುಗೊಳಿಸಿದ ಸಾಧನೆಯನ್ನು ಸರಿಗಟ್ಟಲು ಇಂದು ಜಾವಗಲ್ ಶ್ರೀನಾಥ್ ಕೇವಲ ಎರಡು ವಿಕೆಟ್‌ನಿಂದ ಹಿಂದೆ ಬಿದ್ದರು.

ಏಷ್ಯಾ ಕ್ರಿಕೆಟ್ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಇಂದು ಭಾರತದ ಶ್ರೀನಾಥ್ 86 ರನ್‌ಗಳಿಗೆ ಎಂಟು ವಿಕೆಟ್ ಪಡೆಯುವುದರೊಂದಿಗೆ ಪಾಕಿಸ್ತಾನದ ಎರಡನೇ ಸರದಿಯ ಮೊತ್ತವನ್ನು 316 ರನ್‌ಗಳಿಗೆ ನಿಯಂತ್ರಿಸಿದರು.

ಬ್ಯಾಂಕಿಗೆ ಕನ್ನ: 32 ಲಕ್ಷ ಕಳವು

ಬೆಳಗಾವಿ, ಫೆ. 18– ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದ ಹೊರವಲಯದಲ್ಲಿನ ಚಿಕ್ಕೋಡಿ ಪಟ್ಟಣ ಸಹಕಾರಿ ಬ್ಯಾಂಕಿನ ಶಾಖೆಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಭಾರಿ ಕಳವು ಪ್ರಕರಣದಲ್ಲಿ ಸುಮಾರು 32 ಲಕ್ಷ ರೂ. ಮೌಲ್ಯದ ನಗನಾಣ್ಯ ಕಳವಾಗಿದೆ.

ಎಂಟರಿಂದ ಹತ್ತು ಜನರನ್ನು ಒಳಗೊಂಡಿದ್ದ ಕಳ್ಳರ ತಂಡ ಬ್ಯಾಂಕಿಗೆ ಕನ್ನ ಹಾಕಿ ಭದ್ರತಾ ಕೊಠಡಿಯನ್ನು ಒಡೆದು ಹಾಕಿ 2.5 ಲಕ್ಷ ರೂ. ನಗದು ಮತ್ತು ಸುಮಾರು 29 ಲಕ್ಷ ರೂ. ಬೆಲೆಯ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT