ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಕೆಇಬಿ ಉನ್ನತ ಅಧಿಕಾರಿ ಬಳಿ 90 ಲಕ್ಷ ಅಕ್ರಮ ಗಳಿಕೆ ಪತ್ತೆ

25 ವರ್ಷಗಳ ಹಿಂದೆ
Published 18 ಏಪ್ರಿಲ್ 2024, 19:41 IST
Last Updated 18 ಏಪ್ರಿಲ್ 2024, 19:41 IST
ಅಕ್ಷರ ಗಾತ್ರ

ಹೊಸ ಸರ್ಕಾರ ರಚನೆ: ರಾಷ್ಟ್ರಪತಿ ಆಹ್ವಾನದ ನಿರೀಕ್ಷೆಯಲ್ಲಿ ಕಾಂಗ್ರೆಸ್

ನವದೆಹಲಿ, ಏ. 18– ಪರ್ಯಾಯ ಸರ್ಕಾರ ರಚನೆಯ ಬಗೆಗೆ ಪ್ರತಿಪಕ್ಷಗಳು ಪ್ರತ್ಯೇಕವಾಗಿ ತಮ್ಮ ಪಕ್ಷಗಳ ಉನ್ನತ ಮಟ್ಟದ ಸಮಿತಿಗಳ ಸಭೆ ಕರೆದು ಚರ್ಚೆ ಆರಂಭಿಸಿವೆಯಾದರೂ ಎಲ್ಲ ಪಕ್ಷಗಳು ಒಟ್ಟಿಗೆ ಸೇರಿ ಒಮ್ಮತಕ್ಕೆ ಬರುವ ಯಾವುದೇ ಮಾತುಕತೆಯ ಪ್ರಾರಂಭಿಕ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲವಾದ್ದರಿಂದ, ನೂತನ ಸರ್ಕಾರದ ಅಸ್ತಿತ್ವ ಇನ್ನೂ ಒಂದೆರಡು ದಿನ ವಿಳಂಬವಾಗುವ ಸಾಧ್ಯತೆಯಿದೆ.

ಈ ಮಧ್ಯೆ, 139 ಸಂಖ್ಯಾಬಲ ಹೊಂದಿ ರುವ ಪ್ರಮುಖ ಪಕ್ಷವಾದ ಕಾಂಗ್ರೆಸ್‌, ರಾಷ್ಟ್ರಪತಿ ಕೆ.ಆರ್. ನಾರಾಯಣನ್‌ ಅವರಿಂದ ಆಮಂತ್ರಣ ನಿರೀಕ್ಷಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಪ್ರಮುಖ ನಾಯಕರ ಜತೆ ಇಂದು ಪರ್ಯಾಯ ಸರ್ಕಾರ ರಚನೆ ಕುರಿತು ಚರ್ಚಿಸಿದರು.

ಕೆಇಬಿ ಉನ್ನತ ಅಧಿಕಾರಿ ಬಳಿ 90 ಲಕ್ಷ ಅಕ್ರಮ ಗಳಿಕೆ ಪತ್ತೆ

ಬೆಂಗಳೂರು, ಏ. 18– ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ (ಕೆಇಬಿ) ಉನ್ನತ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದಲ್ಲಿ ಅವರು ಆಸ್ತಿ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ನಗರದ ವಿಶೇಷ ನ್ಯಾಯಾಲಯದಿಂದ ವಾರಂಟ್ ಪಡೆದು ಏ. 16ರಿಂದ ಸತತವಾಗಿ ಈ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಅಧಿಕಾರಿಗೆ ಸೇರಿದ ಆಸ್ತಿಪಾಸ್ತಿ ಮತ್ತು ದಾಖಲೆಗಳ ಶೋಧನೆ ನಡೆಸಿದ್ದು, ದಾಳಿಯನ್ನು ಮುಂದುವರಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ನಗದು, ಒಡವೆ ಸೇರಿದಂತೆ ಸುಮಾರು 90 ಲಕ್ಷ ರೂಪಾಯಿ ಬೆಲೆಯ ಆಸ್ತಿಯನ್ನು ಪತ್ತೆ ಮಾಡಲಾಗಿದೆ ಎಂಬುದು ಮೂಲಗಳಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT