ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ದುಡಿಮೆಗೆ ಮೈ–ಮನ ಒಡ್ಡಿದ ಬಾಲಕಾರ್ಮಿಕರು

Published 29 ಏಪ್ರಿಲ್ 2024, 21:53 IST
Last Updated 29 ಏಪ್ರಿಲ್ 2024, 21:53 IST
ಅಕ್ಷರ ಗಾತ್ರ

ಬೊಫೋರ್ಸ್ ಹಗರಣಕ್ಕೆ ಮತ್ತೆ ಜೀವ ಭಟ್ನಾಗರ್ ವಿರುದ್ಧ ತನಿಖೆಗೆ ಅಸ್ತು

ನವದೆಹಲಿ, ಏ. 29 (ಪಿಟಿಐ)– ಮಾಜಿ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್ ಅವರನ್ನು ವಿಚಾರಣೆಗೆ ಗುರಿಪಡಿಸಲು ಕೇಂದ್ರದ ಅನುಮತಿ ಪಡೆಯುವುದರೊಂದಿಗೆ ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೈಗೆತ್ತಿಕೊಂಡಿರುವ ಸತ್ಯಶೋಧನಾ ಕಾರ್ಯಾಚರಣೆಗೆ ಮಹತ್ವದ ಚಾಲನೆ ದೊರೆತಿದೆ.

ಭಟ್ನಾಗರ್ ವಿರುದ್ಧ ಶೀಘ್ರವೇ ಆರೋಪಪಟ್ಟಿಯೊಂದನ್ನು ಸಿಬಿಐ ಸಲ್ಲಿಸಲಿದ್ದು, ಇದು ಲಂಚ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡುವ ಪ್ರಥಮ ಬಹುಮುಖ್ಯ ಹೆಜ್ಜೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ದುಡಿಮೆಗೆ ಮೈ–ಮನ ಒಡ್ಡಿದ ಬಾಲಕಾರ್ಮಿಕರು

ಬೆಂಗಳೂರು, ಏ. 29– ‘ವಿಶ್ವ ಬಾಲಕಾರ್ಮಿಕ ದಿನಾಚರಣೆ’ (ಏಪ್ರಿಲ್ 30) ಮತ್ತೆ ಬಂದಿದೆ. ಆದರೆ ಬಾಲಕಾರ್ಮಿಕರ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಹಲವಾರು ಯೋಜನೆಗಳು ಮತ್ತು ಕಾರ್ಯಕ್ರಮಗಳು ಕೇವಲ ಘೋಷಣೆಗಳಾಗಿ ಉಳಿದಿವೆಯೇನೋ ಎಂಬಂತೆ, ರಾಜ್ಯದಲ್ಲಿ ಕಾಯಂ ಬಾಲಕಾರ್ಮಿಕರಾಗಿ ಜೀವನ ಕಳೆಯು ತ್ತಿರುವ ಎಳೆಯರ ಸಂಖ್ಯೆಯು ಕಾರ್ಮಿಕ ಇಲಾಖೆ ವರದಿ ಪ್ರಕಾರ ಒಂದು ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT