ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಬಿಜೆಪಿ ಮಿತ್ರಪಕ್ಷಗಳ ಹೊಸ ರಾಷ್ಟ್ರೀಯಕೂಟ ರಚನೆ

ಭಾನುವಾರ 16.5.1999
Published 15 ಮೇ 2024, 19:29 IST
Last Updated 15 ಮೇ 2024, 19:29 IST
ಅಕ್ಷರ ಗಾತ್ರ

ಬಿಜೆಪಿ ಮಿತ್ರಪಕ್ಷಗಳ ಹೊಸ ರಾಷ್ಟ್ರೀಯಕೂಟ ರಚನೆ

ನವದೆಹಲಿ, ಮೇ 15 (ಪಿಟಿಐ)– ಎ.ಬಿ. ವಾಜಪೇಯಿ ಅವರ ನಾಯಕತ್ವದಲ್ಲಿ ಸಾಮಾನ್ಯ ಪ್ರಣಾಳಿಕೆ ಆಧಾರದ ಮೇಲೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಇಂದು ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ’ಯನ್ನು ಆರಂಭಿಸಿವೆ.

ಹೊಸ ಮೈತ್ರಿಕೂಟದಲ್ಲಿ ಡಿಎಂಕೆ ಮತ್ತು ಓಂಪ್ರಕಾಶ್‌ ಚೌತಾಲ ಅವರ ಇಂಡಿಯನ್‌ ನ್ಯಾಷನಲ್‌ ಲೋಕದಳ (ಐಎನ್‌ಎಲ್‌ಡಿ) ಪಕ್ಷಗಳೂ ಸೇರಿವೆ.

ಕಳೆದ ತಿಂಗಳು ಲೋಕಸಭೆಯಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದ ಪರವಾಗಿ ಮತ ಚಲಾಯಿಸಿದ ಪಕ್ಷಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಈ ಪಕ್ಷಗಳ ಸಮನ್ವಯ ಸಮಿತಿಯ ಸಂಚಾಲಕ ಜಾರ್ಜ್‌ ಫರ್ನಾಂಡಿಸ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ನೇತೃತ್ವದ ರಂಗದಲ್ಲಿ ಎಐಎಡಿಎಂಕೆ ಬದಲಿಗೆ ಈಗ ಡಿಎಂಕೆ ಸೇರ್ಪಡೆಯಾಗಿದೆ.

ನಿಷ್ಕ್ರಿಯ ಸರ್ಕಾರಕ್ಕಿಂತ ಚುನಾವಣೆಯೇ ಮೇಲು’

ಬೆಂಗಳೂರು, ಮೇ 15– ವಾಜಪೇಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಗುರಿ ಸಾಧನೆಯಲ್ಲಿ ಹಿಂದೆ ಬಿದ್ದಿರುವುದನ್ನು ಅಂಕಿಅಂಶಗಳೇ ಎತ್ತಿ ಹೇಳಿರುವುದರಿಂದ ನಿಷ್ಕ್ರಿಯ ಸರ್ಕಾರಕ್ಕಿಂತ ಕೆಲಸ ಮಾಡುವ ಸರ್ಕಾರದ ಆಯ್ಕೆ ಮಾಡಲು ಜನತೆಗೆ ಚುನಾವಣೆ ಅವಕಾಶ ಕಲ್ಪಿಸಿದೆ ಎಂದು ಪ್ರದೇಶ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜನಾರ್ಧನ ಪೂಜಾರಿ ಅವರು ಇಂದು ಇಲ್ಲಿ ತಿಳಿಸಿದರು.

ರಾಷ್ಟ್ರದ ಮೇಲೆ ಅನಗತ್ಯವಾಗಿ ಚುನಾವಣೆಯನ್ನು ಹೇರಲಾಗಿದೆ. ಇದರಿಂದ ಸುಮಾರು 800 ಕೋಟಿ ರೂಪಾಯಿ ಹೊರೆ ರಾಷ್ಟ್ರದ ಮೇಲೆ ಬೀಳುತ್ತದೆ ಎಂಬ ವಾದವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಅಲ್ಲಗಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT