ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಇರಾಕ್ ವಿರುದ್ಧ ನಿಲ್ಲದ ದಾಳಿ, ರಷ್ಯಾ ರಾಯಭಾರಿ ಹಿಂದಕ್ಕೆ

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಇರಾಕ್ ವಿರುದ್ಧ ನಿಲ್ಲದ ದಾಳಿ, ರಷ್ಯಾ ರಾಯಭಾರಿ ಹಿಂದಕ್ಕೆ

ಬಾಗ್ದಾದ್, ಡಿ. 18 (ಪಿಟಿಐ, ಎಪಿ)– ಇರಾಕ್ ವಿರುದ್ಧ ಅಮೆರಿಕ ಮತ್ತು ಬ್ರಿಟನ್ನಿನ ಜಂಟಿ ದಾಳಿ ಎರಡನೇ ದಿನವಾದ ಇಂದೂ ಮುಂದುವರೆದಿದ್ದರಿಂದ ಕ್ಷಿಪಣಿ ಹಾಗೂ ಬಾಂಬ್‌ ಸ್ಫೋಟಗಳ ಸದ್ದು ರಾಜಧಾನಿ ಬಾಗ್ದಾದನ್ನು ಆವರಿಸಿತ್ತು. 

ಆದರೆ, ಸಾವು, ನೋವಿನ ಬಗ್ಗೆ ಈವರೆಗೆ ಖಚಿತವಾಗಿ ತಿಳಿದುಬಂದಿಲ್ಲ. ಎರಡನೇ ದಾಳಿಯಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದು, 75 ಜನರು ಗಾಯಗೊಂಡಿದ್ದಾರೆ ಎಂದು ಇರಾಕಿನ ಆರೋಗ್ಯ ಸಚಿವ ಒಮೇದ್ ಮೆಹ್ವತ್ ಮುಬಾರಕ್ ತಿಳಿಸಿದ್ದಾರೆ.

**

ಅಂಚೆಯಲ್ಲಿ ಬಂದ ಸ್ಫೋಟ ಸಿಡಿದು 9 ಜನರಿಗೆ ಗಾಯ

ಹೈದರಾಬಾದ್, ಡಿ. 18 (ಪಿಟಿಐ)– ಪಾರ್ಸೆಲ್ ರೂಪದಲ್ಲಿ ಬಂದ ಅಂಚೆಯನ್ನು ತೆರೆದಾಗ ಬಾಂಬ್ ಸ್ಫೋಟಗೊಂಡ ನಾಲ್ಕು ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಮಂದಿ ಗಾಯಗೊಂಡ ವರದಿ ಬಂದಿದೆ.

ಹೈದರಾಬಾದಿನ ಜನನಿಬಿಡ ಚಿಕ್ಕಪಲ್ಲಿಯಲ್ಲಿ ವಾಸಿಸುವ ಒಬ್ಬ ಅಂಚೆ ಪೇದೆ ಮತ್ತು ಹಣಕಾಸು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಂದ ಅಂಚೆ ಪಾರ್ಸೆಲ್ ತೆರೆದಾಗ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT