ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಕಾಂಗ್ರೆಸ್‌ ಅಭ್ಯರ್ಥಿಗೆ 88 ಸಾವಿರ ಅಧಿಕ ಮತಗಳ ಜಯ

ಬುಧವಾರ, 24 ಏಪ್ರಿಲ್ 1974
Published 23 ಏಪ್ರಿಲ್ 2024, 22:13 IST
Last Updated 23 ಏಪ್ರಿಲ್ 2024, 22:13 IST
ಅಕ್ಷರ ಗಾತ್ರ

ಲೋಕಸಭೆ ಮರು ಚುನಾವಣೆ: ಕಲ್ಬುರ್ಗಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ 88 ಸಾವಿರ ಅಧಿಕ ಮತಗಳ ಜಯ

ಬೆಂಗಳೂರು, ಏ. 23: ರಾಜ್ಯದ ರಾಜಕೀಯ ದೃಷ್ಟಿಯಿಂದ ಮಹತ್ವಪೂರ್ಣವಾದುದೆಂದು ಭಾವಿಸಲಾಗಿದ್ದ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮರೆಡ್ಡಿ ಅವರು 87,791 ಮತಗಳಿಂದ ಭಾರಿ ಜಯ ಗಳಿಸಿದ್ದಾರೆ. 

1971ರ ಐತಿಹಾಸಿಕ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 27 ಸ್ಥಾನಗಳನ್ನೂ ಗಳಿಸಿದ್ದ ಕಾಂಗ್ರೆಸ್‌, ಎರಡನೇ ಬಾರಿಗೆ ನಡೆದ ಪರೀಕ್ಷೆಯಲ್ಲಿ ಜಯ ಗಳಿಸಿ ತನ್ನ ಹಿಂದಿನ ವಿಕ್ರಮವನ್ನು ಉಳಿಸಿಕೊಂಡಿದೆ.

1971ರ ನಂತರ ಮಂಡ್ಯ ಕ್ಷೇತ್ರದಲ್ಲಿ ನಡೆದ ಮರು ಚುನಾವಣೆಯಲ್ಲಿ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಂಡಿತು.

ಆನಂತರ ಕಲ್ಬುರ್ಗಿ ಕ್ಷೇತ್ರದಲ್ಲಿ ನಡೆದ ಮರು ಚುನಾವಣೆಯಲ್ಲೂ ಈಗ ತನ್ನ ಸ್ಥಾನವನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT