ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಇಂದಿನಿಂದ ಇನ್ನೂ 102 ರೈಲುಗಳ ಸಂಚಾರ ರದ್ದು

ಶನಿವಾರ, 27 ಏಪ್ರಿಲ್ 1974
Published 26 ಏಪ್ರಿಲ್ 2024, 19:33 IST
Last Updated 26 ಏಪ್ರಿಲ್ 2024, 19:33 IST
ಅಕ್ಷರ ಗಾತ್ರ

ಧರಣಿ ಮುಕ್ತಾಯ: ಸೊಂಡೂರು ಪ್ರಕರಣ– ನ್ಯಾಯಾಂಗ ತನಿಖೆಗೆ ಸರ್ಕಾರದ ಒಪ್ಪಿಗೆ

ಬೆಂಗಳೂರು, ಏ. 26– ಸೊಂಡೂರಿನ ಶ್ರೀ ವೈ. ತಿಮ್ಮಪ್ಪ ಅವರ ಬಂಧನಕ್ಕೆ ಕಾರಣವಾದ ‘ಸಂದರ್ಭ’ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗಾಧಿಕಾರಿಯಿಂದ ವಿಚಾರಣೆ ನಡೆಸಲು ಸರ್ಕಾರ ಒಪ್ಪಿದ ಕಾರಣ, ನಿನ್ನೆ ಆರಂಭವಾದ ವಿಧಾನಸಭೆಯ ವಿರೋಧಿ ಸದಸ್ಯರ ಧರಣಿ ಇಂದು ಮುಕ್ತಾಯವಾಯಿತು.

ಆನಂತರ ಸಭೆಯಲ್ಲಿ ಶಾಂತ ವಾತಾವರಣ ಉಂಟಾಗಿ ದಿನದ ಕಾರ್ಯಕ್ರಮ ನಡೆಯಿತು.

ರಾತ್ರಿಯೆಲ್ಲ ವಿಧಾನಸಭಾ ಭವನ ಹಾಗೂ ಲಾಬಿಗಳಲ್ಲಿ ಧರಣಿ ಮುಂದುವರಿದರೆ, ವಿರೋಧಿ ಸದಸ್ಯರೊಡನೆ ಸಂಸದೀಯ ಸಚಿವ ಶ್ರೀ ಎಸ್‌.ಎಂ. ಕೃಷ್ಣ ಅವರು ಸಮಾಲೋಚನೆ ನಡೆಸಿದರು.

ಇಂದಿನಿಂದ ಇನ್ನೂ 102 ರೈಲುಗಳ ಸಂಚಾರ ರದ್ದು

ನವದೆಹಲಿ, ಏ. 26– ಮುಂದಿನ ತಿಂಗಳ 8ರಿಂದ ರೈಲ್ವೆ ಮುಷ್ಕರ ಆರಂಭಿಸುವ ಬೆದರಿಕೆ ಇರುವುದರಿಂದ, ಅತ್ಯಗತ್ಯ ರೈಲುಗಳ ಸಂಚಾರಕ್ಕೆ ಕಲ್ಲಿದ್ದಲನ್ನು ಉಳಿತಾಯ ಮಾಡುವ ಸಲುವಾಗಿ ನಾಳೆಯಿಂದ ಇನ್ನೂ 102 ಪ್ರಯಾಣಿಕ ರೈಲುಗಳ ಓಡಾಟವನ್ನು ರದ್ದುಪಡಿಸುವುದಾಗಿ ರೈಲ್ವೆ ಇಲಾಖೆಯು ಇಂದು ಪ್ರಕಟಿಸಿದೆ.

ಸಂಚಾರ ರದ್ದುಪಡಿಸುವುದಾಗಿ ನಿನ್ನೆ ಪ್ರಕಟಿಸಿದ 98 ರೈಲುಗಳೂ ಸೇರಿ ಒಟ್ಟು 200 ರೈಲುಗಳು ನಾಳೆಯಿಂದ ಓಡಾಡುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT