ಸೋಮವಾರ, ಆಗಸ್ಟ್ 15, 2022
27 °C
50 ವರ್ಷಗಳ ಹಿಂದೆ ಬುಧವಾರ 16.6.1971

50 ವರ್ಷಗಳ ಹಿಂದೆ: ಬುಧವಾರ 16.6.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತು ಹೊಣೆಯಿಂದ ತಪ್ಪಿಸಿಕೊಳ್ಳಲು ಬಿಡೆವು: ಇಂದಿರಾ

ನವದೆಹಲಿ, ಜೂನ್ 15– ಬಾಂಗ್ಲಾ ದೇಶದ ನಿರಾಶ್ರಿತರ ಸಮಸ್ಯೆಯನ್ನು ಎದುರಿಸಲು ಭಾರತ ತನ್ನ ಕೈಮೀರಿ ಶ್ರಮಿಸುವುದಾದರೂ ಆ ಬಗ್ಗೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.

ಭಾರತಕ್ಕೆ ಲಕ್ಷಾಂತರ ಮಂದಿ ನಿರಾಶ್ರಿತರು ವಲಸೆ ಬಂದಿರುವ ವಿಷಯದ ಬಗ್ಗೆ ಮೂರು ಗಂಟೆಗಳ ಕಾಲ ನಡೆದ ಚರ್ಚೆಗೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು ‘ಹೊರಗಡೆಯಿಂದ ನೆರವು ಬರಲಿ, ಬಿಡಲಿ, ಜಗತ್ತಿನ ಈ ಭಾಗದಲ್ಲಿ ಸಂಭವಿಸು ತ್ತಿರುವ ಘಟನೆಗಳ ಪರಿಣಾಮವು ಅಂತರ ರಾಷ್ಟ್ರೀಯ ಸಮುದಾಯದ ಮೇಲೆ ಹಾನಿಯುಂಟು ಮಾಡುತ್ತದೆ’ ಎಂದರು.

‘ಸರ್ಕಾರದಿಂದ ಕರ್ತವ್ಯಲೋಪ’

ನವದೆಹಲಿ, ಜೂನ್ 15– ನಿರಾಶ್ರಿತರ ಪುನರ್‌ವ್ಯವಸ್ಥೆ ವಿಷಯದಲ್ಲಾಗಲಿ
ಅಥವಾ ಹೋರಾಟಕ್ಕೆ ನೆರವಾಗುವು
ದರಲ್ಲಾಗಲಿ ಸರ್ಕಾರ ತನ್ನ ಕೈಮೀರಿ ಶ್ರಮಿಸು ತ್ತಿಲ್ಲವೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ಇಂದು ಅಭಿಪ್ರಾಯ
ಪಟ್ಟರೆಂದು ಗೊತ್ತಾಗಿದೆ.

ಬಾಂಗ್ಲಾ ದೇಶದ ಸಮಸ್ಯೆ ಕುರಿತು ಚರ್ಚಿಸಲು ಇಲ್ಲಿ ಸಭೆ ಸೇರಿದ್ದ ಅವರು ಬಾಂಗ್ಲಾ ದೇಶದ ಬಗ್ಗೆ ಸರ್ಕಾರದ ನೀತಿಯ ವಿಷಯದಲ್ಲಿ ಸ್ಪಷ್ಟೀಕರಣ ಕೇಳುವುದಕ್ಕೆ ಪ್ರಧಾನಿ ಭೇಟಿ ಮಾಡಲೂ ನಿರ್ಧರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು