ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ರಾಜಕೋಟೆಯಲ್ಲಿ ಪೊಲೀಸ್‌ ಗುಂಡೇಟಿಗೆ ಐವರ ಬಲಿ

Published 18 ಜನವರಿ 2024, 23:00 IST
Last Updated 18 ಜನವರಿ 2024, 23:00 IST
ಅಕ್ಷರ ಗಾತ್ರ

ಶನಿವಾರ 19–1–1974

ರಾಜಕೋಟೆಯಲ್ಲಿ ಪೊಲೀಸ್‌ ಗುಂಡೇಟಿಗೆ ಐವರ ಬಲಿ 

ರಾಜಕೋಟೆ, ಜ. 18 – ಬೆಲೆ ಏರಿಕೆ ವಿರುದ್ಧ ಇಲ್ಲಿ ಇಂದು ನಡೆದ ಬಂದ್ ಅವಧಿಯಲ್ಲಿ ಗಲಭೆ, ಲೂಟಿ ಹಾಗೂ ಬೆಂಕಿ ಹಚ್ಚುವುದರಲ್ಲಿ ತೊಡಗಿದ ಗುಂಪನ್ನು ಚದುರಿಸಲು ಪೊಲೀಸ್ ಮತ್ತು ಸಿಆರ್‌ಪಿ ಅವರು ಅನೇಕ ಸುತ್ತು ಗುಂಡು ಹಾರಿಸಿದಾಗ ಐವರು ಸತ್ತರು.

ಪೊಲೀಸರ ಗೋಲಿಬಾರಿನಲ್ಲಿ ಇನ್ನಿತರ ಮೂವರು ಗಾಯಗೊಂಡರು. ಆಸ್ಪತ್ರೆಗೆ ಸೇರಿರುವ ಗಾಯಗಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರ ಗೋಲಿಬಾರಿನಲ್ಲಿ ಇಬ್ಬರು ಸಿತ್ತಿದ್ದಾರೆಂದು ಅಧಿಕೃತ ವರದಿ ತಿಳಿಸಿದೆ. 

ಬೆಲೆ ಏರಿಕೆ ವಿರುದ್ಧ ಬಂದ್‌ಗೆ ಜನಸಂಘ ಹಾಗೂ ಇತರ ವಿರೋಧಪಕ್ಷಗಳು ಕರೆಕೊಟ್ಟಿದ್ದವು. 

ಶ್ರೀಕೃಷ್ಣಾಪುರ ಮಠಾಧೀಶರಿಂದ ಪರ್ಯಾಯ ಪೀಠಾರೋಹಣ

ಉಡುಪಿ, ಜ. 18 – ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪರ್ಯಾಯ ಪೀಠಾರೋಹಣ ಸಮಾರಂಭವು ಇಂದು ಇಲ್ಲಿ ವಿಜೃಂಭಣೆಯಿಂದ ನರವೇರಿತು.

ಬೆಳಿಗ್ಗೆ 6.15ಕ್ಕೆ ಜೋಡುಕಟ್ಟೆಯಲ್ಲಿ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಪುರಪ್ರಮುಖರು ಹಾಗೂ ಇತರ ಮಠಾಧೀಶರರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT