ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಅನಾಥಾಲಯದ ಹೆಸರಲ್ಲಿ ಲೂಟಿ’ ನಿಲ್ಲಿಸಲು ಉಗ್ರ ಕ್ರಮ

Published 29 ಮಾರ್ಚ್ 2024, 23:08 IST
Last Updated 29 ಮಾರ್ಚ್ 2024, 23:08 IST
ಅಕ್ಷರ ಗಾತ್ರ

ಅನಾಥಾಲಯದ ಹೆಸರಲ್ಲಿ ಲಕ್ಷಾಂತರ ರೂ. ‘ಲೂಟಿ’ ನಿಲ್ಲಿಸಲು ಉಗ್ರ ಕ್ರಮ

ಬೆಂಗಳೂರು, ಮಾರ್ಚ್ 29– ರಾಜ್ಯದಲ್ಲಿರುವ ಸುಮಾರು 232 ಅನಾಥಾಲಯಗಳ ಹೆಸರಿನಲ್ಲಿ ಪ್ರತಿವರ್ಷ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ‘ಲೂಟಿ’ಯಾಗುತ್ತಿರುವ ಅನಾಥ ಪರಿಸ್ಥಿತಿಯನ್ನು ಕಳವಳದಿಂದ ಗಮ ನಿಸಿರುವ ಸರ್ಕಾರ, ಈ ಅಪವ್ಯಯ ತಪ್ಪಿಸಲು ಉಗ್ರ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.

ಅನಾಥಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸುಳ್ಳು ಸಂಖ್ಯೆ ನೀಡಿ ಸರ್ಕಾರದಿಂದ ಹಣ ಪಡೆಯುವುದು, ಅನುಕೂಲಸ್ಥ ಹುಡುಗರಾಗಿದ್ದರೂ ಅವರು ನಿರ್ಗತಿಕರೆಂದು ಸರ್ಟಿಫಿಕೇಟ್‌ ಪಡೆಯುವುದು, ಜೊತೆಗೆ ವಿದ್ಯಾರ್ಥಿ
ಗಳಿಂದಲೂ ಹಣ ವಸೂಲಿ ಮಾಡುವುದು, ಅನಾಥಾಲಯಗಳ ವ್ಯವಸ್ಥೆಯಲ್ಲಿ ಸರ್ಕಾರದ ಗಮನಕ್ಕೆ ಬಂದಿರುವ ಅವ್ಯವಹಾರಗಳಾಗಿವೆ.

ಅಡಿಗರ ‘ವರ್ಧಮಾನ’ ಅತ್ಯುತ್ತಮ ಗ್ರಂಥ: 3 ಸಾವಿರ ರೂ. ಬಹುಮಾನ

ಬೆಂಗಳೂರು, ಮಾರ್ಚ್ 29– ಗೋಪಾಲಕೃಷ್ಣ ಅಡಿಗರು ಬರೆದ ‘ವರ್ಧಮಾನ’ ಎಂಬ ಕವನ ಸಂಗ್ರಹವನ್ನು 1972ನೇ ಸಾಲಿನ ಅತ್ಯುತ್ತಮ ಕನ್ನಡ ಗ್ರಂಥ ಎಂದು ತೀರ್ಮಾನಿಸಿ ರಾಜ್ಯದ ಸಾಹಿತ್ಯ ಅಕಾಡೆಮಿ ಮೂರು ಸಹಸ್ರ ರೂಪಾಯಿ ಬಹುಮಾನ ನೀಡಿದೆ.

ಎಲ್.ಎಸ್‌.ಶೇಷಗಿರಿರಾಯರ ‘ಇಂಗ್ಲಿಷ್‌ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ’ಯು ವಿಮರ್ಶಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT