ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ಈ ದಿನ: ತುಳು, ಕೊಂಕಣಿ ಭಾಷೆಗಳಿಗೂ ಅವಕಾಶ ಸಿಗಲಿ: ಅರಸು

50 ವರ್ಷಗಳ ಹಿಂದೆ ಈ ದಿನ
Published 12 ಜನವರಿ 2024, 19:31 IST
Last Updated 12 ಜನವರಿ 2024, 19:31 IST
ಅಕ್ಷರ ಗಾತ್ರ

ತೆರಿಗೆಗಳ್ಳತನ ನಿವಾರಣೆಗಾಗಿ ಶೋಧ, ವಶದ ನಿಯಮ ಕ್ರಮಬದ್ಧ: ‘ಸುಪ್ರೀಂ’

ನವದೆಹಲಿ, ಜ.12– ಆದಾಯ ತೆರಿಗೆ ಕಾನೂನಿನಂತೆ ಶೋಧಿಸಿ ವಶಪಡಿಸಿಕೊಳ್ಳಲು ಇರುವ ಅವಕಾಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. 

ತೆರಿಗೆಗಳ್ಳತನವನ್ನು ದಮನ ಮಾಡಲು ಹಾಗೂ ಸರ್ಕಾರಕ್ಕೆ ಬರಬೇಕಾದ ಬಾಕಿಯ ವಸೂಲಿಗೆ ಇರುವ ಉಗ್ರ ಕ್ರಮಗಳುತಾವಾಗಿಯೇ ನ್ಯಾಯಬದ್ಧವಾದವು. ಸಮುದಾಯದ ಆರ್ಥಿಕ ಜೀವನದ ಸತ್ವವನ್ನು ಇಂತಹ ತೆರಿಗೆಗಳ್ಳತನ ಎಷ್ಟು ಕೊರೆದು ಹಾಕುತ್ತದೆ ಎಂಬುದನ್ನು ಯಾರೂ ಉಪೇಕ್ಷಿಸುವಂತಿಲ್ಲ ಎಂದು ಹೇಳಿದೆ. ಈ ನಿಯಮದ ಕ್ರಮಬದ್ಧತೆಯನ್ನು ಪ್ರಶ್ನಿಸಿದ್ದ ರಿಟ್ ಅರ್ಜಿಗಳನ್ನು ವಜಾ ಮಾಡಿದೆ. 

ತುಳು, ಕೊಂಕಣಿ ಭಾಷೆಗಳಿಗೂ ಅವಕಾಶ ಸಿಗಲಿ: ಅರಸು

ಮಂಗಳೂರು, ಜ. 12– ‘ಕರಾವಳಿ ಜಿಲ್ಲೆಗಳಲ್ಲಿ ವಿಶಿಷ್ಟವಾದ ಸಂಸ್ಕೃತಿ ಇದ್ದು, ಕನ್ನಡ ಭಾಷೆ ಜೊತೆಗೆ ತುಳು ಮತ್ತು ಕೊಂಕಣಿ ಭಾಷೆಗಳಿಗೂ, ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರಕ್ಕೂ ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸಾಕಷ್ಟು ಅವಕಾಶ ಸಿಗುವಂತಾಗಲಿ’ ಎಂದು ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಹಾರೈಸಿದರು. 

ಇಂದು ಇಲ್ಲಿನ ಕದ್ರಿಗುಡ್ಡದಲ್ಲಿ ಆಕಾಶವಾಣಿ ನಿಲಯಕ್ಕೆ ಕೇಂದ್ರ ಸರ್ಕಾರದ ಸುದ್ದಿ ಮತ್ತು ಪ್ರಸಾರ ಖಾತೆಯ ಉಪಸಚಿವ ಧರ್ಮವೀರ ಸಿನ್ಹ ಅವರ ಅಧ್ಯಕ್ಷತೆಯಲ್ಲಿ ದೇವರಾಜ ಅರಸು ಅವರು ಶಂಕುಸ್ಥಾಪನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT