ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ಈ ದಿನ: ಬಾಂಗ್ಲಾದೇಶಕ್ಕೆ ಪಾಕ್‌ ಮಾನ್ಯತೆ ಅಧಿಕೃತ ಪ್ರಕಟಣೆ

Published 22 ಫೆಬ್ರುವರಿ 2024, 19:33 IST
Last Updated 22 ಫೆಬ್ರುವರಿ 2024, 19:33 IST
ಅಕ್ಷರ ಗಾತ್ರ

ಬಾಂಗ್ಲಾದೇಶಕ್ಕೆ ಪಾಕ್‌ ಮಾನ್ಯತೆ ಅಧಿಕೃತ ಪ್ರಕಟಣೆ

ಲಾಹೋರ್‌, ಫೆ. 22– ಬಾಂಗ್ಲಾದೇಶಕ್ಕೆ ಪಾಕಿಸ್ತಾನವು ರಾಜತಾಂತ್ರಿಕ ಮನ್ನಣೆ ನೀಡಿದೆಯೆಂದು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಪಾಕಿಸ್ತಾನದ ಹಿತಾಸಕ್ತಿ ಹಾಗೂ ಇಸ್ಲಾಂ ರಾಷ್ಟ್ರಗಳ ಐಕಮತ್ಯ ರಕ್ಷಣೆ ದೃಷ್ಟಿಯಿಂದ ನೀಡಲಾಗಿರುವ ಈ ಮನ್ನಣೆ ಇಂದಿನಿಂದಲೇ ಜಾರಿಗೆ ಬರುವುದೆಂದು ಪ್ರಧಾನಿ ಜುಲ್ಫಿಕರ್‌ ಅಲಿ ಭುಟ್ಟೊ ಹೇಳಿದರು.

ಪಾಕಿಸ್ತಾನದಿಂದ ಒಡೆದುಹೋಗಿ, ಸ್ವತಂತ್ರ ರಾಷ್ಟ್ರವಾಗಿ ಉದಯಿಸಿದ 26 ತಿಂಗಳ ಬಳಿಕ ಅಪಾರ ರಾಜಕೀಯ ಚೌಕಾಸಿಯ ನಂತರ ನೀಡಲಾದ ಮಾನ್ಯತೆಯನ್ನು ಗೌರ್ನರ್‌ಗಳು, ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಭುಟ್ಟೊ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT