ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ಈ ದಿನ: ರಾಜ್ಯ ಭೂಸುಧಾರಣೆ ವಿಧೇಯಕಕ್ಕೆ ರಾಷ್ಟ್ರಪತಿ ಸಮ್ಮತಿ

50 ವರ್ಷಗಳ ಹಿಂದೆ ಈ ದಿನ: ರಾಜ್ಯ ಭೂಸುಧಾರಣೆ ವಿಧೇಯಕಕ್ಕೆ ರಾಷ್ಟ್ರಪತಿ ಸಮ್ಮತಿ
Published 23 ಫೆಬ್ರುವರಿ 2024, 19:43 IST
Last Updated 23 ಫೆಬ್ರುವರಿ 2024, 19:43 IST
ಅಕ್ಷರ ಗಾತ್ರ

ರಾಜ್ಯ ಭೂಸುಧಾರಣೆ ವಿಧೇಯಕಕ್ಕೆ ರಾಷ್ಟ್ರಪತಿ ಸಮ್ಮತಿ

ನವದೆಹಲಿ, ಫೆ. 23– ಕರ್ನಾಟಕ ಭೂಸುಧಾರಣೆ ವಿಧೇಯಕಕ್ಕೆ ರಾಷ್ಟ್ರಪತಿ ಅವರು ಸಮ್ಮತಿ ನೀಡಿರುವರೆಂದು ಕರ್ನಾಟಕದ ಕಂದಾಯ ಸಚಿವ ಎನ್‌. ಹುಚ್ಚಮಾಸ್ತಿಗೌಡ ಅವರು ಇಂದು ಸಂಜೆ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ವಿಧೇಯಕ ಗೆಜೆಟ್‌ನಲ್ಲಿ ಪ್ರಕಟವಾದ ದಿನದಿಂದ ಜಾರಿಗೆ ಬರುತ್ತದೆ. ಇದರಿಂದ ಈಗ ಭಾರಿ ಜಮೀನ್ದಾರರ ಗೇಣಿದಾರರಾಗಿರುವ ಐದು ಲಕ್ಷಕ್ಕೂ ಹೆಚ್ಚು ಜನ ರೈತರಿಗೆ ಅನುಕೂಲವಾಗುತ್ತದೆ. ವಿಧೇಯಕದಲ್ಲಿ ನಿಗದಿ
ಪಡಿಸಿರುವ ಮಿತಿಗಿಂತ ಹೆಚ್ಚು ಜಮೀನನ್ನು ಹೊಂದಿರುವ ಧಾರ್ಮಿಕ ಸಂಸ್ಥೆಗಳು ಸಹ ತಮ್ಮ ಹೆಚ್ಚುವರಿ ಜಮೀನನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಆ ಹೆಚ್ಚುವರಿ ಜಮೀನನ್ನುಭೂಹೀನರಿಗೆ ಹಂಚಲಾಗುವುದು ಎಂದು
ಶ್ರೀ ಗೌಡ ಅವರು ತಿಳಿಸಿದರು.

ಉಪಖಂಡದಲ್ಲಿ ಶಾಂತಿ ಸ್ಥಾಪನೆಗೆ ಭಾರತ – ಬಾಂಗ್ಲಾ ಯತ್ನ: ಮುಜೀಬ್‌

ನವದೆಹಲಿ, ಫೆ. 23– ರಾಷ್ಟ್ರಗಳ ನಡುವೆ ಅದರಲ್ಲೂ ಮುಖ್ಯವಾಗಿ ಉಪಖಂಡದಲ್ಲಿಯ ದೇಶಗಳ ನಡುವೆ ಶಾಂತಿ ಮತ್ತು ಸಹಕಾರವನ್ನುಂಟು ಮಾಡುವುದಕ್ಕಾಗಿ ಬಾಂಗ್ಲಾದೇಶ ಮತ್ತು ಭಾರತದ ಜನರು ಅವಿಶ್ರಾಂತ ಪ್ರಯತ್ನ ನಡೆಸುವರು ಎಂದು ಬಾಂಗ್ಲಾದೇಶದ ಪ್ರಧಾನಿ ಮುಜೀಬ್‌ ರೆಹಮಾನ್‌ ಅವರು ವಿಶ್ವಾಸ
ವ್ಯಕ್ತಪಡಿಸಿದ್ದಾರೆ.

ಲಾಹೋರ್‌ನಲ್ಲಿ ನಡೆಯುತ್ತಿರುವ ಇಸ್ಲಾಮಿ ಶೃಂಗಸಭೆಯಲ್ಲಿ ಭಾಗವಹಿಸಲು ಈ ಬೆಳಿಗ್ಗೆ ದೆಹಲಿಯ ವಿಮಾನದಲ್ಲಿ ಹೋಗುತ್ತಿದ್ದಾಗ ಪ್ರಧಾನಿ ಇಂದಿರಾ ಗಾಂಧಿಯವರಿಗೆ ನೀಡಿದ ಸಂದೇಶದಲ್ಲಿ ಬಾಂಗ್ಲಾದೇಶದ ಪ್ರಧಾನಿ ಅವರು ‘ಭಾರತದ ಸ್ನೇಹಪರ ಜನತೆಗೆ ಹಾಗೂ ಪ್ರಧಾನಿ
ಇಂದಿರಾ ಗಾಂಧಿ ಅವರಿಗೆ ಶುಭಾಶಯ’ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT