ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ‘ಪ್ರತಿಭಾ ಪಲಾಯನ’ ಅಮೆರಿಕಕ್ಕೆ ‘ವರ’

Published 10 ಮಾರ್ಚ್ 2024, 23:58 IST
Last Updated 10 ಮಾರ್ಚ್ 2024, 23:58 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ವೈದ್ಯರು, ದಾದಿಯರು ವಲಸೆ ಬರುವುದು ನಿಂತು
ಹೋದರೆ, ಅಮೆರಿಕ, ಬ್ರಿಟನ್ನಿನ ಬಹುತೇಕ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಣೆ ಸ್ಥಗಿತಗೊಳ್ಳುವುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಾಲ್ಡ್‌ಹೀಂ ತಿಳಿಸಿದ್ದಾರೆ. 

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಈ ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಾಗಿ ಪಡೆಯುತ್ತಿರುವ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ಗಳು ವಾಸ್ತವವಾಗಿ ಆ ದೇಶಗಳಿಂದ ಕೋಟ್ಯಂತರ ಡಾಲರ್ ಬೆಲೆಯ ಉಡುಗೊರೆಗಳನ್ನೇ ಈ ರೂಪದಲ್ಲಿ ಪಡೆಯುತ್ತಿವೆ ಎಂದೂ ಅವರು ‘ಪ್ರತಿಭಾ ಪಲಾಯನ’ ಕುರಿತ ತಮ್ಮ ಹೊಸ ವರದಿಯಲ್ಲಿ ತಿಳಿಸಿದ್ದಾರೆ. 

‘ಈ ದೇಶಗಳು ವಲಸೆ ಬಂದ ವೈದ್ಯರಿಗೆ ಯಾವ ತರಬೇತಿ ವೇತನವೂ ಇಲ್ಲದೆ, ಅವರಿಂದ ಅತಿಕ್ಲಿಷ್ಟಕರವಾದ ವೈದ್ಯಕೀಯ ಸೇವೆಗಳನ್ನು ಪಡೆಯುತ್ತಿವೆ. ಏಕೆಂದರೆ ಅವರಿಗೆ ತಮ್ಮ ತಮ್ಮ ದೇಶಗಳಲ್ಲಿ ತರಬೇತಿ ದೊರೆತಿರುತ್ತದೆ. ಅಮೆರಿಕದಲ್ಲಿ ಅಂತಹ ಒಬ್ಬ ವೈದ್ಯನಿಗೆ ತರಬೇತಿ ನೀಡಲು 50 ಸಾವಿರ ಡಾಲರ್ ವೆಚ್ಚ ತಗಲುತ್ತದೆ’ ಎಂದರು. 

1972ರಲ್ಲಿ ಏಳು ಸಾವಿರ ಮಂದಿ ವಿದೇಶಿ ವೈದ್ಯರನ್ನು ಅಮೆರಿಕ ಬರಮಾಡಿಕೊಂಡಿದೆ. ಇವರೆಲ್ಲ ವಲಸೆ ಬಾರದೇ ಇದ್ದಿದ್ದರೆ, ಇಷ್ಟೇ ಮಂದಿ ಅಮೆರಿಕದ ವೈದ್ಯರಿಗೆ ತರಬೇತಿ ನೀಡ
ಬೇಕಾದರೆ 35 ಸಾವಿರ ಡಾಲರ್ ಖರ್ಚಾಗುತ್ತಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ. 

ಆಯಾ ದೇಶಗಳು ಪ್ರತಿಭಾ ಪಲಾಯನ ನಿಲ್ಲಿಸಲು ವಲಸೆ ಹೋಗುವುದನ್ನು ತಡೆಯುವುದು, ವಿದೇಶದಲ್ಲಿ ನೆಲಸಬಯಸುವವರ ಮೇಲೆ ತೆರಿಗೆ ಹೇರಿಕೆ ಮುಂತಾದ ಕ್ರಮಗಳನ್ನೂ ಅವರು ಸೂಚಿಸಿದ್ದಾರೆ. 

ಅಗಡಿ ನಿವೃತ್ತಿ: ಸರ್ಕಾರದ ಅಸಹಕಾರ–ಹಸ್ತಕ್ಷೇಪ ಧೋರಣೆಗೆ ಖಂಡನೆ

ಬೆಂಗಳೂರು, ರಾಜ್ಯ ಸರ್ಕಾರದ ಅಸಹಕಾರ ಹಾಗೂ ಪ್ರತಿದಿನದ ಕೆಲಸದಲ್ಲಿ ಹಸ್ತಕ್ಷೇಪದಿಂದ ಗೃಹ ನಿರ್ಮಾಣ ಮಂಡಳಿಯ ಕೆಲಸವು ಕಳೆದ ಒಂದು ವರ್ಷದಿಂದ ನಿಂತಿದೆ ಎಂದು ಮಂಡಳಿಯ ಅಧ್ಯಕ್ಷ ಅಗಡಿ ಸಂಗಣ್ಣ ಅವರು ಇಂದು ಇಲ್ಲಿ ಆಕ್ಷೇಪಿಸಿದರು. 

ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಇಂದು ನಿವೃತ್ತರಾದ ಅಗಡಿ ಅವರು, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಜನರಿಗೆ ವಾಸಕ್ಕೆ ಮನೆಗಳನ್ನು ಒದಗಿಸುವ ಮಹತ್ಕಾರ್ಯ
ದಲ್ಲಿ ತೊಡಗಿದ್ದರೂ, ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ತಲೆಹಾಕುವಂತಹ ಸನ್ನಿವೇಶ
ಗಳನ್ನು ಎದುರಿಸಬೇಕಾಯಿತು ಎಂದು ಅವರು
ಅಸಮಾಧಾನವನ್ನು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT