ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ: ನೈಸರ್ಗಿಕ ಗೊಬ್ಬರದ ಬಳಕೆ ಅಗತ್ಯ

Published 14 ಏಪ್ರಿಲ್ 2024, 19:22 IST
Last Updated 14 ಏಪ್ರಿಲ್ 2024, 19:22 IST
ಅಕ್ಷರ ಗಾತ್ರ

ನೈಸರ್ಗಿಕ ಗೊಬ್ಬರದ ಬಳಕೆ ಅಗತ್ಯ ರೈತರಿಗೆ ಮನವರಿಕೆ ಮಾಡಿಕೊಡಲು ಕರೆ

ಬೆಂಗಳೂರು, ಏ. 14– ರಾಸಾಯನಿಕ ಗೊಬ್ಬರದ ಕೊರತೆ ಇರುವಾಗ,
ಪರ‍್ಯಾಯವಾಗಿ ಅಷ್ಟೇ ಉಪಯುಕ್ತವಾಗಿರುವ ನೈಸರ್ಗಿಕ ಗೊಬ್ಬರದ ಬಳಕೆಯ ಅಗತ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಗೆ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮನವರಿಕೆ
ಮಾಡಿಕೊಡಬೇಕೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.

ರಾಜ್ಯ ಸಮುದಾಯ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಅಧಿಕಾರಿಗಳ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿಗಳು, ಹಸಿರುಗೊಬ್ಬರ, ಗುಂಡಿಗೊಬ್ಬರ ಮತ್ತು ಕೆರೆಯ ಗೋಡುಮಣ್ಣು ಮುಂತಾದ ನೈಸರ್ಗಿಕ ಗೊಬ್ಬರವನ್ನು ಮತ್ತೆ ಜನಪ್ರಿಯಗೊಳಿಸಬೇಕಾದ ಕಾಲ ಸನ್ನಿಹಿತ
ಆಗಿದೆ ಎಂದರು.

40 ಲಕ್ಷ ಜನರಿಂದ ಕುಂಭಮೇಳ ಸ್ನಾನ

ಹರಿದ್ವಾರ, ಏ. 14– ದೇಶದಾದ್ಯಂತ ಹಲವು ಊರುಗಳಿಂದ ಆಗಮಿಸಿದ್ದ ಸುಮಾರು 40 ಲಕ್ಷ ಜನ ಇಂದು ಕುಂಭಮೇಳದ ಸಂದರ್ಭದಲ್ಲಿ ಪವಿತ್ರ ಗಂಗಾಸ್ನಾನ ಮಾಡಿದರು. ಹರಕಿ ಪೌರೀ ಸ್ನಾನಘಟ್ಟ
ವೊಂದರಲ್ಲೇ 20 ಲಕ್ಷ ಜನ ಮುಳುಗಿ ಎದ್ದರು.

ಹನ್ನೆರಡು ವರ್ಷಗಳಿಗೊಮ್ಮೆ ಆಗುವ ಕುಂಭಮೇಳವು ಸರತಿಯಂತೆ ಹರಿದ್ವಾರ, ಅಲಹಾಬಾದ್, ಉಜ್ಜಯಿನಿ ಮತ್ತು ನಾಸಿಕದಲ್ಲಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT