ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಸ್ಥಗಿತ

Published 17 ಏಪ್ರಿಲ್ 2024, 20:31 IST
Last Updated 17 ಏಪ್ರಿಲ್ 2024, 20:31 IST
ಅಕ್ಷರ ಗಾತ್ರ

ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಸ್ಥಗಿತ

ಬೆಂಗಳೂರು, ಏ. 17– ಶೇ 80ರಷ್ಟಕ್ಕಿಂತ ಹೆಚ್ಚು ಮಂದಿ ಅಧ್ಯಾಪಕರು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನಕ್ಕೆ ಇಂದು ಇಲ್ಲಿ ಬಹಿಷ್ಕಾರವನ್ನು ಆರಂಭಿಸಿ ಭಾರಿ ಶಾಂತಿಯುತವಾದ ಮೆರವಣಿಗೆ ನಡೆಸಿದರು.

ಮೌಲ್ಯಮಾಪನ ಕಾರ್ಯ ಆರಂಭವಾದ ಕೇಂದ್ರಗಳ ಪೈಕಿ 6 ಕೇಂದ್ರಗಳಲ್ಲಿ ಶೇ 20ರಷ್ಟು ಮಂದಿ ಅಧ್ಯಾಪಕರು ಹಾಜರಿದ್ದರೆಂದು ಸೆಕೆಂಡರಿ ಶಿಕ್ಷಣದ ಪರೀಕ್ಷಾ ಮಂಡಳಿಯ ವಕ್ತಾರರು ಸಂಜೆ ತಿಳಿಸಿದರು. 

ನ್ಯಾಷನಲ್‌ ಕಾಲೇಜ್‌ ಕೇಂದ್ರದಲ್ಲಿ ಒಬ್ಬ ಅಧ್ಯಾಪಕರೂ ಹಾಜರಿರಲಿಲ್ಲ. ಉಳಿದ ಎರಡು ಕೇಂದ್ರಗಳಲ್ಲಿ ಮಧ್ಯಾಹ್ನದ ನಂತರ ಮೌಲ್ಯಮಾಪನವನ್ನು ನಿಲ್ಲಿಸಲಾಯಿತು.

ಕಲಬೆರಕೆ ಪತ್ತೆಗೆ ನೆರವು ಬೇಕೆ...? 

ಬೆಂಗಳೂರು, ಏ. 17– ತಾವು ಕೊಳ್ಳುವ ಪದಾರ್ಥಗಳಲ್ಲಿ ಕಡಿಮೆ ತೂಕ ಹಾಗೂ ಕಲಬೆರಕೆಯನ್ನು ಸಂದೇಹಿಸುವಿರಾ? 

ಹಾಗಾದರೆ ಸದ್ಯದಲ್ಲೇ ‘ಫ್ರೆಂಡ್ಸ್‌ ವರ್ಲ್ಡ್‌’ ಸ್ವಯಂಸೇವಕರು ತೆರೆಯಲಿರುವ ಕೇಂದ್ರಗಳಿಗೆ ಹೋಗಿ ನೆರವು ಪಡೆಯಿರಿ. ತೂಕ ಮಾಡುವ ಹಾಗೂ ಕಲಬೆರಕೆ ಪತ್ತೆ ಮಾಡುವ ಸಾಧನಗಳೊಡನೆ ಈ ಸೇವಕರು ಸಿದ್ಧರಾಗಿರಲಿದ್ದಾರೆ.

‘ಸಾಮಾಜಿಕ ದೋಷಗಳ’ ನಿವಾರಣೆಯ ವಿರುದ್ಧ ‘ನೈತಿಕ ವಿರೋಧ’ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಮೊದಲಲ್ಲಿ ಮಲ್ಲೇಶ್ವರಂ, ಬಸವನಗುಡಿ ಹಾಗೂ ಶಿವಾಜಿನಗರ ‍ಪ್ರದೇಶಗಳಲ್ಲಿ ಮೋಸ ಪತ್ತೆ ಮಾಡುವ ಕೇಂದ್ರಗಳನ್ನು ತೆರೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT