ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ರೈಲ್ವೆ ಮುಷ್ಕರ ಮುಕ್ತಾಯ: ಇಂದು ಕೆಲಸಕ್ಕೆ ವಾಪಸು

Published 28 ಮೇ 2024, 1:16 IST
Last Updated 28 ಮೇ 2024, 1:16 IST
ಅಕ್ಷರ ಗಾತ್ರ

ರೈಲ್ವೆ ಮುಷ್ಕರ ಮುಕ್ತಾಯ ಇಂದು ಕೆಲಸಕ್ಕೆ ವಾಪಸು

ನವದೆಹಲಿ, ಮೇ 27– ಇಪ್ಪತ್ತು ದಿನಗಳಿಂದ ರೈಲ್ವೆ ನೌಕರರು ಹೂಡಿದ್ದ ಮುಷ್ಕರ ನಾಳೆ (ಮಂಗಳವಾರ) ಬೆಳಿಗ್ಗೆ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ.

ಮುಷ್ಕರವನ್ನು ಏಕಪಕ್ಷೀಯವಾಗಿ ವಾಪಸು ತೆಗೆದುಕೊಳ್ಳುವಂತೆ ರೈಲ್ವೆ ನೌಕರರ ಹೋರಾಟ ಕುರಿತ ರಾಷ್ಟ್ರೀಯ ಸಮನ್ವಯ ಸಮಿತಿಯ ಕ್ರಿಯಾ ಸಮಿತಿ ಇಂದು ಸುದೀರ್ಘ ಕಾಲ ನಡೆದ ತನ್ನ ಸಭೆಯಲ್ಲಿ ತೀರ್ಮಾನಿಸಿತು.

ಎಷ್ಟೆಷ್ಟು ನಷ್ಟ?: ಪ್ರಯಾಣಿಕರು ಹಾಗೂ ಸಾಮಗ್ರಿ ಸಾಗಣೆಯಿಂದ ರೈಲ್ವೆ ಖಾತೆಗೆ ಬರು ತ್ತಿದ್ದ ಸಂಪಾದನೆಯಲ್ಲಿ 50 ಕೋಟಿ ರೂ. ನಷ್ಟ.

ಮುಷ್ಕರಕಾರರಿಗೆ ವೇತನದಿಂದ ಆದ ನಷ್ಟ 25 ಕೋಟಿ ರೂ. ಅರ್ಥ ವ್ಯವಸ್ಥೆಗೆ ಉಂಟಾದ ನಷ್ಟ 500 ಕೋಟಿ ರೂ.

ರೈಲ್ವೆ ಮುಷ್ಕರದಿಂದ ಬ್ಯಾಂಕಿಂಗ್, ವಿಮೆ ಹಾಗೂ ಇನ್ನಿತರ ವಾಣಿಜ್ಯ ವಹಿವಾಟುಗಳಿಗೂ ಹಾನಿಯುಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT