ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬಿಹಾರ ವಿಧಾನಸಭೆಗೆ ಇಂದು ಬೃಹತ್‌ ವಿದ್ಯಾರ್ಥಿ ಘೇರಾವೋ

Published 17 ಮಾರ್ಚ್ 2024, 23:34 IST
Last Updated 17 ಮಾರ್ಚ್ 2024, 23:34 IST
ಅಕ್ಷರ ಗಾತ್ರ

ಪಟನಾ, ಮಾರ್ಚ್‌ 17– ಬೆಲೆಗಳ ಏರಿಕೆ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ಹಾಗೂ ಉದ್ಯೋಗ ಮೂಲದ ಶಿಕ್ಷಣಕ್ಕೆ ಒತ್ತಾಯಪಡಿಸಲು ವಿದ್ಯಾರ್ಥಿಗಳು ಸೋಮವಾರ ಬಿಹಾರ ವಿಧಾನಸಭೆಗೆ ಘೇರಾವೋ ಮಾಡಲಿದ್ದಾರೆ.

ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ವಿದ್ಯಾರ್ಥಿಗಳು ಈಗಾಗಲೇ ಇಲ್ಲಿಗೆ ಆಗಮಿಸಿದ್ದಾರೆ. ಬಿಹಾರದ ಕಮ್ಯುನಿಸ್ಟೇತರ ವಿದ್ಯಾರ್ಥಿ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯು ಈ ಘೇರಾವೋವನ್ನು ವ್ಯವಸ್ಥೆಗೊಳಿಸಿದೆ.

ರಾಜ್ಯದ 5 ಮೆಡಿಕಲ್‌
ಕಾಲೇಜುಗಳಿಗೆ ಮನ್ನಣೆ ಇಲ್ಲ

ಬರೋಡ, ಮಾರ್ಚ್‌ 17– ಕಡಿಮೆ ದರ್ಜೆ ಕಾರಣವನ್ನು ಆಧರಿಸಿ ಭಾರತದ ವೈದ್ಯಕೀಯ ಮಂಡಲಿಯು ರಾಷ್ಟ್ರದಲ್ಲಿ ಒಟ್ಟು 9 ಖಾಸಗಿ ಮೆಡಿಕಲ್‌ ಕಾಲೇಜುಗಳಿಗೆ ಮನ್ನಣೆಯನ್ನು ರದ್ದುಪಡಿಸಿದೆ. ಈ ಪೈಕಿ ದಾವಣಗೆರೆ ಮೆಡಿಕಲ್‌ ಕಾಲೇಜು, ಮಣಿಪಾಲದಲ್ಲಿರುವ ಕಸ್ತೂರಬಾ ಮೆಡಿಕಲ್‌ ಕಾಲೇಜು, ಬೆಳಗಾವಿಯಲ್ಲಿರುವ ಜೆ.ಎಲ್‌.ಎನ್‌. ಮೆಡಿಕಲ್‌ ಕಾಲೇಜು, ಕಲ್ಬುರ್ಗಿ ಮೆಡಿಕಲ್‌ ಕಾಲೇಜು ಮತ್ತು ಬೆಂಗಳೂರಿನ ಸೇಂಟ್‌ಜಾನ್‌ ಮೆಡಿಕಲ್‌ ಕಾಲೇಜುಗಳೂ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT