ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಟಿ.ಟಿ. ಕೃಷ್ಣಮಾಚಾರಿ ನಿಧನ

Published 7 ಮಾರ್ಚ್ 2024, 23:50 IST
Last Updated 7 ಮಾರ್ಚ್ 2024, 23:50 IST
ಅಕ್ಷರ ಗಾತ್ರ

ಭತ್ತ–ಅಕ್ಕಿ ಬಿಟ್ಟು ಮಿಕ್ಕೆಲ್ಲ ಆಹಾರ ಧಾನ್ಯಗಳ ಸಾಗಣೆ ನಿರ್ಬಂಧ ರದ್ದು

ಬೆಂಗಳೂರು, ಮಾರ್ಚ್ 7– ಭತ್ತ ಮತ್ತು ಅಕ್ಕಿಯನ್ನು ಬಿಟ್ಟು ಉಳಿದ ಎಲ್ಲ ಆಹಾರ ಧಾನ್ಯಗಳ ಸಾಗಾಣಿಕೆಯ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆಯೆಂದು ಆಹಾರ ಸಚಿವ ಕೆ.ಎಚ್.ಪಾಟೀಲ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು.

ಈ ನಿರ್ಬಂಧವನ್ನು ತೆಗೆದು ಹಾಕಿರುವುದರಿಂದ ಗೋಧಿ ಹಾಗೂ ಗೋಧಿ ಪದಾರ್ಥಗಳು, ಜೋಳ ಮತ್ತು ಒರಟು ಧಾನ್ಯವನ್ನು ರಾಜ್ಯದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವ ಅಡ್ಡಿ ಅಡಚಣೆ ಇಲ್ಲದೆ ಸಲೀಸಾಗಿ ಸಾಗಿಸಲು ಸಾಧ್ಯವಾಗುತ್ತದೆ.

ಟಿ.ಟಿ. ಕೃಷ್ಣಮಾಚಾರಿ ನಿಧನ

ಮದ್ರಾಸು, ಮಾರ್ಚ್ 7– ಕೇಂದ್ರದ ಮಾಜಿ ಹಣಕಾಸು ಸಚಿವ ತಿರುವಳ್ಳೂರುತೊಟ್ಟೈ ಕೃಷ್ಣಮಾಚಾರಿ ಅವರು ಇಂದು ಮಧ್ಯಾಹ್ನ ನಿಧನರಾದರು.

74 ವರ್ಷವಾಗಿದ್ದ ಅವರಿಗೆ ಕಳೆದ ಮೇ ತಿಂಗಳಲ್ಲಿ ಹೃದಯಾಘಾತ ಸಂಭವಿಸಿತ್ತು. ಆನಂತರ ಅವರ ಆರೋಗ್ಯ ತೃಪ್ತಿಕರವಾಗಿರಲಿಲ್ಲ. ಕಳೆದ ಶನಿವಾರ ಅವರ ಮೂತ್ರಕೋಶ ನಿಷ್ಕ್ರಿಯವಾಯಿತು. ಮೂತ್ರ ವಿಸರ್ಜನೆ ನಿಂತು ಹೋಯಿತು. ನಿನ್ನೆ ಸಂಜೆ ಉಸಿರಾಡು
ವುದರಲ್ಲೂ ಕಷ್ಟ ಕಾಣಿಸಿಕೊಂಡಿತು.

ಇಂದು ಮಧ್ಯಾಹ್ನ 12.55ಕ್ಕೆ ಟಿ.ಟಿ.ಕೆ ಅವರು ದೈವಾಧೀನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT