ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 9.5.1972

Last Updated 8 ಮೇ 2022, 20:45 IST
ಅಕ್ಷರ ಗಾತ್ರ

‘ಕರ್ನಾಟಕ’ ಅಥವಾ ‘ಕನ್ನಡನಾಡು’ ಎಂದಾಗಲಿ: ವರಕವಿ ದ.ರಾ. ಬೇಂದ್ರೆ ಅವರ ಸಮ್ಮತಿ

ಧಾರವಾಡ, ಮೇ 8– ರಾಜ್ಯದ ಹೆಸರನ್ನು ಬದಲಾಯಿಸಲು ರಾಜ್ಯ ಸಂಪುಟವು ಕೈಗೊಂಡ ನಿರ್ಧಾರವನ್ನು ಉತ್ತರ ಕರ್ನಾಟಕದ ಸಮಗ್ರ ಜನತೆ ಮನಸಾರೆ ಸ್ವಾಗತಿಸಿ, ಬಹು ಕಾಲದಿಂದ ಬಯಸಿದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ.

ರಾಜ್ಯದ ಹೆಸರು ‘ಕರ್ನಾಟಕ’ ಅಥವಾ ‘ಕನ್ನಡನಾಡು’ ಎಂದಿರಬೇಕೆ ಎಂಬ ಬಗೆಗೆ ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಬಹು ಮತದ ಬೆಂಬಲ ‘ಕರ್ನಾಟಕ’ ಎಂಬ ಹೆಸರಿಗೆ ಇದ್ದಂತೆ ಕಂಡುಬರುತ್ತದೆ.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಿರಿಯ ಸಾಹಿತಿಗಳು, ಪ್ರಮುಖರು ತಮ್ಮ ಅಭಿಪ್ರಾಯವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಹೆಸರು ‘ಕರ್ನಾಟಕ’ ಎಂದಾಗಲಿ ಅಥವಾ ‘ಕನ್ನಡನಾಡು’ ಎಂದಾ ಗಲಿ ಒಟ್ಟಾರೆ ಎರಡಕ್ಕೂ ನನ್ನ ಸಮ್ಮತಿ ಇದೆ’ ಎಂದು ವರಕವಿ ಡಾ.ದ.ರಾ.ಬೇಂದ್ರೆ ಅವರು ತಿಳಿಸಿದರೂ ‘ಕನ್ನಡನಾಡು’ ಎಂದು ಕರೆದರೆ ಹೆಚ್ಚು ಹೊಂದಿಕೆ ಆಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT