ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ ಗೊಂದಲ ತಪ್ಪಲಿ

Last Updated 10 ಜುಲೈ 2022, 18:23 IST
ಅಕ್ಷರ ಗಾತ್ರ

ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳಿಂದ ದೊರಕಬೇಕಾದ ಕಟ್ಟಡ ನಿರ್ಮಾಣ ಅನುಮತಿ ಪತ್ರವು ಸಾಫ್ಟ್‌ವೇರ್ ಗೊಂದಲದಿಂದಾಗಿ ಸ್ಥಗಿತಗೊಂಡಿದೆ. ಬರೀ ಎರರ್, ವೇಟ್, ಮೇಂಟೆನೆನ್ಸ್ ಎಂಬ ಮೂರು ಪದಗಳನ್ನು ಬಿಟ್ಟರೆ ಬೇರೇನೂ ಇದರಲ್ಲಿ ಕಾಣುವುದೇ ಇಲ್ಲ.

ನಗರ ಯೋಜನಾ ಪ್ರಾಧಿಕಾರದ ಅನುಮತಿ ಇಲ್ಲದ ಲೇಔಟ್‌ಗಳ ಖಾತಾ ತಡೆಯುವಿಕೆಯಿಂದಾಗಿ ಕಟ್ಟಡನಕ್ಷೆ ಅನುಮೋದನೆ ಕೋರಿ ಎಷ್ಟೋ ಗ್ರಾಹಕರು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಜನರು ಬೇಸತ್ತಿದ್ದಾರೆ. ಸರ್ಕಾರಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಆದಾಯ ಖೋತಾ ಆಗಿದೆ. ಜನರಿಗೂ ನೋಂದಣಿ, ಪರಭಾರೆ ಸಾಲ ಸಿಗದೇ ಪರದಾಡುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ವ್ಯವಹಾರ ಸ್ಥಗಿತಗೊಂಡಿದೆ. ಸಂಬಂಧಪಟ್ಟವರು ಸಮಸ್ಯೆಯನ್ನು ಬೇಗ ಬಗೆಹರಿಸಲಿ.

ವೀರೇಶ ಬಂಗಾರಶೆಟ್ಟರ, ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT