ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಣೆರಹಿತ ಹೇಳಿಕೆ

ಅಕ್ಷರ ಗಾತ್ರ

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ‘ಸಂವಿಧಾನ ಜಾಗೃತಿ’ ಸಮಾವೇಶದಲ್ಲಿ ಶಾಸಕ ಎನ್.ಮಹೇಶ್ ಅವರು ‘ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಸಾಮಾನ್ಯರಲ್ಲ. ಇವರು ಹಾಗೂ ಬಿಜೆಪಿಯವರು ದೇಶದಲ್ಲಿ ‘ಸಿವಿಲ್ ವಾರ್’ ಯೋಜಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ (ಪ್ರ.ವಾ., ಫೆ. 3). ಇದು ಆಧಾರರಹಿತ ಮತ್ತು ಹೊಣೆರಹಿತ ಹೇಳಿಕೆ. ದೇಶದಲ್ಲಿ ಆಗುತ್ತಿರುವ ಪ್ರಸಕ್ತ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡುವಾಗ ಶಾಸಕರು, ಕಾಂಗ್ರೆಸ್ ಮತ್ತು ಬಿಜೆಪಿಯ ಜೊತೆ ಕಮ್ಯುನಿಸ್ಟರನ್ನೂ ಸೇರಿಸಿ ಹೇಳಿರುವುದು ಸರಿಯಲ್ಲ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಆಡಳಿತದ ಜನವಿರೋಧಿ ನೀತಿಗಳ ವಿರುದ್ಧ ರಾಜಿ ಇಲ್ಲದೆ ಕಮ್ಯುನಿಸ್ಟರು ಹೋರಾಡುತ್ತಾ ಬಂದಿದ್ದಾರೆ.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೇಂದ್ರದಲ್ಲಿ ಕಾಂಗ್ರೆಸ್‍ ಅನ್ನು ಕಮ್ಯುನಿಸ್ಟರು ಸಂದರ್ಭಾನುಸಾರ ಬೆಂಬಲಿಸಿದ್ದು ಬಿಟ್ಟರೆ, ಸ್ವಾತಂತ್ರ್ಯಪೂರ್ವದಿಂದಲೂ ಆ ಪಕ್ಷದ ದ್ವಿಮುಖ ನೀತಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಮೂಲಭೂತವಾದಿ ಬಿಜೆಪಿಗರ ತಾತ್ವಿಕ ಎದುರಾಳಿಗಳೇ ಕಮ್ಯುನಿಸ್ಟರು. ಇದು ಎಲ್ಲಾ ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿರುವ ಐತಿಹಾಸಿಕ ಸತ್ಯ. ನೊಂದವರ ಧ್ವನಿಯಾಗಬೇಕಾದರೆ ಸೈದ್ಧಾಂತಿಕ ಬದ್ಧತೆಯಿಂದ ಇರಬೇಕಾಗುತ್ತದೆ ಎಂಬುದನ್ನು ಮಹೇಶ್‍ ಅವರು ಮನಗಾಣಬೇಕು.

ಬಿ.ರಾಜಶೇಖರಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT