7

ಸಂಬಳ ಪಡೆಯಲು ಸಾಯಬೇಕೆ?

Published:
Updated:

ಆರು ತಿಂಗಳಿಂದ ಸಂಬಳ ಸಿಗದಿರುವ ಕಾರಣಕ್ಕೆ ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ (ಪ್ರ.ವಾ., ಜುಲೈ 10) ಓದಿ ವಿಷಾದವೆನಿಸಿತು. ಸಂಬಳ ಪಡೆಯಲು ಸಾಯಬೇಕೇ?

ಬಿಬಿಎಂಪಿ ಮೇಯರ್, ಮೃತರ ಕುಟುಂಬದವರಿಗೆ ಹತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ಪರಿಹಾರ ರೂಪದಲ್ಲಿ ಕೊಟ್ಟಿದ್ದಾರೆ. ಮೇಯರ್ ಅವರ ಈ ವರ್ತನೆ ‘ಮಾನವೀಯತೆ’ಯಿಂದ ಕೂಡಿದೆ ಎಂದು ಹೇಳಲಾಗದು. ಇದ್ದಾಗ ಸಂಬಳ ಕೊಡದೆ ಸತಾಯಿಸಿದ ಸಂಸ್ಥೆಯೊಂದು, ಸತ್ತ ಮೇಲೆ ಲಕ್ಷಗಟ್ಟಲೆ ಪರಿಹಾರವನ್ನು ಕೊಟ್ಟರೆ ಮಾನವೀಯತೆ ಮೆರೆದಿದೆ ಎಂದು ಹೇಳಲಾದೀತೆ?

-ಉಡುಪಿ ಅನಂತೇಶ ರಾವ್, ಬೆಂಗಳೂರು

 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !