ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?

Last Updated 15 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ರಾಜಕಾಲುವೆ ಮತ್ತು ಇತರೆ ಒತ್ತುವರಿ ತೆರವು ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರೊಂದಿಗೆ ಕೆಲವು ಪ್ರಶ್ನೆಗಳಿಗೂ ಕಾರಣವಾಗಿದೆ. ತೆರವಿಗೊಳಗಾದ ಪ್ರತಿಯೊಂದು ಮನೆ, ಅಪಾರ್ಟ್‌ಮೆಂಟ್‌ ಮತ್ತು ವಿಲ್ಲಾದವರು ಸಂಬಂಧಿಸಿದ ಸಂಸ್ಥೆಗಳಿಂದ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದು ತಲೆ ಮೇಲೊಂದು ಸೂರನ್ನು ಮಾಡಿಕೊಂಡಿರಬಹುದು. ಕೆಲವರು ದಶಕಗಳ ಕಾಲ ಅಲ್ಲಿ ವಾಸ್ತವ್ಯ ಮಾಡಿದ್ದಾರೆ.

ನೀರು, ವಿದ್ಯುತ್‌, ಒಳಚರಂಡಿ ಸೌಲಭ್ಯ ನೀಡುವಾಗ ಗೋಚರವಾಗದ ನ್ಯೂನತೆ ಈಗ ಕಂಡಿದ್ದು ಹೇಗೆ? ನ್ಯೂನತೆಗಳಿದ್ದರೂ ಅನುಮತಿ ನೀಡಿದ್ದು ಯಾರ ತಪ್ಪು? ಮೊಗ್ಗಿನಲ್ಲಿಯೇ ಚಿವುಟಿದ್ದರೆ ಈ ಸಮಸ್ಯೆ ಉಂಟಾಗುತ್ತಿತ್ತೇ? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಲಕ್ಷಾಂತರ, ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಮನೆ ಕಣ್ಣೆದುರೇ ಬುಲ್ಡೋಜರ್‌ಗೆ ಆಹುತಿಯಾಗುವ ಶಿಕ್ಷೆ ಸಹಿಸಲು ಕಷ್ಟಸಾಧ್ಯ. ಇದು, ಬುಲ್ಡೋಜರ್‌ ಅನ್ನು ಕಾರ್ಯಾಚರಣೆಗೆ ಇಳಿಸಿದವರಿಗೆ
ಅರ್ಥವಾಗುವುದಿಲ್ಲ.

– ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT