ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕತೆ ಮೀರಿದ ಆರ್ಥಿಕ ಸಂಬಂಧ

ಅಕ್ಷರ ಗಾತ್ರ

ಮುಸಲ್ಮಾನರನ್ನು ವಿರೋಧಿಯನ್ನಾಗಿಸುವ ಪ್ರತೀ ಅಂಶವೂ ಮೂಲದಲ್ಲಿ ರೈತವಿರೋಧಿಯೂ ಆಗಿದೆ. ಒಂದೆಡೆ ಜಾತೀಯತೆ, ಇನ್ನೊಂದೆಡೆ ಧರ್ಮದ ಅಂಧಕಾರ ರೈತಸಮುದಾಯವನ್ನು ಬಡವಾಗಿಸುತ್ತಿರುವುದು ಈ ಕ್ಷಣದ ಸತ್ಯ. ಕುರಿ, ಕೋಳಿ, ದನ, ಚರ್ಮ, ರೇಷ್ಮೆ, ಮಚ್ಚು, ಕೊಡಲಿ ಎಲ್ಲದರಲ್ಲೂ ರೈತ- ಮುಸ್ಲಿಮರ ಪಾಲುದಾರಿಕೆ ಸಮಾನವಾಗಿದೆ. ಪ್ರತಿಯೊಂದು ಕೃಷಿ ಉತ್ಪನ್ನದ ಮೊದಲ ಗ್ರಾಹಕರೇ ಮುಸಲ್ಮಾನರು. ಎತ್ತಿನ ಲಾಳದಿಂದ ಹಿಡಿದು ರೈತನಿಗೆ ಹೊರೆಯಾದ ಮುದಿ ಹಸುವನ್ನು ಕೊಳ್ಳುವವರು ಅವರೇ. ಭಾವನಾತ್ಮಕತೆ ಮೀರಿದ ಆರ್ಥಿಕ ಸಂಬಂಧಗಳಿಗೆ ಇವು ನಿದರ್ಶನ. ಬೆಂಗಳೂರು- ಮೈಸೂರು ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಾಗಿರುವ ಬೀಡಾಡಿ ದನಗಳೇ ಈ ಕೊಡು- ಕೊಳ್ಳು ಸಂಬಂಧದ ಮುರಿತಕ್ಕೆ ಒಂದು ಸಾಕ್ಷಿ.

ಮಚ್ಚು, ಕೊಡಲಿಯೂ ಸೇರಿದಂತೆ ಕೃಷಿ ಸಲಕರಣೆಗಳನ್ನು ರಿಪೇರಿ ಮಾಡುವವರು ಮುಸಲ್ಮಾನರೇ. ಬದಲಾದ ಧರ್ಮರಾಜಕಾರಣದಲ್ಲಿ ಹಳ್ಳಿಗಳ ಅಲ್ಪಸಂಖ್ಯಾತ ಕಸುಬುದಾರರು ಪಟ್ಟಣ ಸೇರುತ್ತಿದ್ದಾರೆ. ಕೂಲಿಕಾರ್ಮಿಕರ ಸಮಸ್ಯೆಯ ಜೊತೆಗೆ, ರೈತನಿಗೆ ಅವಶ್ಯಕವಾಗಿದ್ದ ಅನೇಕ ಕೌಶಲಗಾರರು ದೂರವಾಗುತ್ತಿದ್ದಾರೆ. ಇದರಿಂದಾಗಿ ದೀರ್ಘಾವಧಿಯಲ್ಲಿ ತೊಂದರೆಗೆ ಸಿಲುಕುವುದು ರೈತರೇ. ದೇಶದ ಬೆನ್ನೆಲುಬು ಎನ್ನುವ ರೈತನ ಪಕ್ಕೆಲುಬು ಮತ್ತಷ್ಟು ಸಡಿಲವಾಗುತ್ತದೆ. ನಮ್ಮನ್ನಾಳುವ ದೊರೆಗಳಿಗೆ ರೈತರ ಬಗೆಗೆ ನೈಜ ಕಾಳಜಿ ಇದ್ದರೆ, ಯಾವ ಹೊಸ ಯೋಜನೆ, ಸಬ್ಸಿಡಿಗಳನ್ನೂ ಘೋಷಿಸುವುದು ಬೇಡ. ತಮ್ಮ ತಮ್ಮ ನಾಲಿಗೆಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಅವರು ರೈತರಿಗೆ ಮಾಡಬಹುದಾದ ದೊಡ್ಡ ಉಪಕಾರ.

- ಶಾಂತರಾಜು ಎಸ್. ಮಳವಳ್ಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT