ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ತಿಳಿಸಿರುವುದು ಸೂಕ್ತ ತೀರ್ಮಾನವಲ್ಲ. ಮೃತಪಟ್ಟವರಲ್ಲಿ ಎಷ್ಟೋ ಜನ ಆಯಾ ಕುಟುಂಬಕ್ಕೆ ಆದಾಯದ ಮೂಲಗಳಾಗಿದ್ದರು. ಇಂದು ಕುಟುಂಬಗಳು ಅಂತಹ ವ್ಯಕ್ತಿಗಳನ್ನು ಕಳೆದುಕೊಂಡು ದುಃಖದಲ್ಲಿರುವ ಸಂದರ್ಭದಲ್ಲಿ, ಸರ್ಕಾರ ತನ್ನ ಈ ತೀರ್ಮಾನದಿಂದ ಮತ್ತೆ ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೂರಾರು ಜನರು ಸೂಕ್ತ ಸಮಯಕ್ಕೆ ಆಕ್ಸಿಜನ್, ಹಾಸಿಗೆ, ವೆಂಟಿಲೇಟರ್ಗಳು ಸಿಗದೆ ಸಾವನ್ನಪ್ಪಿದ್ದಾರೆ. ಇವನ್ನು ಸಹಜ ಸಾವುಗಳು ಅನ್ನಲು ಬರುವುದಿಲ್ಲ. ಆರೋಗ್ಯ ಕೇಂದ್ರಗಳಲ್ಲಿನ ಲೋಪದೋಷಗಳಿಂದ ಈ ಸಾವುಗಳು ಸಂಭವಿಸಿರುವುದರಿಂದ ಇದು ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.

ಆರೋಗ್ಯ ಕ್ಷೇತ್ರದ ಬಗೆಗಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ಸಂಭವಿಸಿದ್ದು, ಇದರ ನೇರ ಹೊಣೆಗಾರಿಕೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಹೀಗಿರುವಾಗ, ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯವಾಗಿರುತ್ತದೆ.

-ನಾಗೇಶ್ ಹರಳಯ್ಯ, ಕಲಬುರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.