ಶುಕ್ರವಾರ, ಜುಲೈ 23, 2021
23 °C

‘ಇರಲಿ ಸಂಸ್ಕಾರ’ ಎಂದವರಿಗೆ ನಮಸ್ಕಾರ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಕೊನೆ ನಮಸ್ಕಾರ, ಇರಲಿ ಸಂಸ್ಕಾರ’ ಎಂಬ ವಿಶೇಷ ವರದಿ (ಪ್ರ.ವಾ., ಜುಲೈ 19) ಅತ್ಯಂತ ಸಾಂದಭಿ೯ಕವಾಗಿದೆ. ಕೋವಿಡ್‌ ರೋಗಿಗಳು ಮೃತಪಟ್ಟಾಗ, ಸೋಂಕು ತಮಗೂ ಹರುಡುತ್ತದೆ ಎಂಬ ಭೀತಿಯಿಂದ ಮೃತರ ಕುಟುಂಬಸ್ಥರು, ಬಂಧು-ಬಳಗದವರು ಅಂತ್ಯಕ್ರಿಯೆಯಿಂದ ದೂರ ಸರಿದು ಅನಾಥಶವಗಳನ್ನಾಗಿ ಮಾಡುತ್ತಿದ್ದಾರೆ. ಮಾನವೀಯ ಮೌಲ್ಯ, ಆಚಾರ-ವಿಚಾರ, ಸಂಪ್ರದಾಯ ಎಲ್ಲವೂ ದೂರವಾಗುತ್ತಿರುವುದು ನಿಜಕ್ಕೂ ಅಮಾನವೀಯ.

ಇಂತಹ ಸಂದರ್ಭದಲ್ಲಿ, ಕೋವಿಡ್‌ ರೋಗಿಗಳ ಮರಣಾನಂತರ ವೈರಾಣು ಹರಡದು ಎಂಬುದನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟ, ಅವರ ಅಂತ್ಯಕ್ರಿಯೆಗೆ ಯಾವುದೇ ರೀತಿ ಅಡ್ಡಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ವೈದ್ಯರಿಗೆ ಧನ್ಯವಾದಗಳು.

- ಎ.ಜಿ.ಸುರೇಂದ್ರಬಾಬು, ಹೊಳಲ್ಕೆರೆ, ಚಿತ್ರದುಗ೯

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು