ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ನಡೆ

Last Updated 29 ಜನವರಿ 2020, 19:52 IST
ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಗೊಂದಲಗಳಿಗೆ ಸಂಬಂಧಿಸಿದಂತೆ ಕನ್ನಡ ಸಂಘಟನೆಗಳಿಗೆ ಜಿಲ್ಲಾಧಿಕಾರಿ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಅಭಿನಂದನೀಯ- ಅನುಕರಣೀಯ. ‘ನನ್ನನ್ನು ಕರೆದಿಲ್ಲ’, ‘ನನಗೆ ತಿಳಿಸಿಲ್ಲ’ ಎಂಬಂಥ ಮಾತುಗಳು ಅಸಮರ್ಥನೀಯ. ಎಲ್ಲರನ್ನೂ ಪ್ರತ್ಯೇಕವಾಗಿ ಆಹ್ವಾನಿಸಲು ಇಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಮಕ್ಕಳ ಮದುವೆ ನಡೆಯುವುದಿಲ್ಲ, ಗೃಹಪ್ರವೇಶದಂಥ ವೈಯಕ್ತಿಕ ಸಮಾ ರಂಭ ಇದಲ್ಲ. ನಾಡು-ನುಡಿಯ ರಕ್ಷಣೆಗಾಗಿ ನಾಡಿಗರೆಲ್ಲ ಒಂದಾಗಿ ಕನ್ನಡದ ಹಬ್ಬವನ್ನು ಆಚರಿಸುವ ಸಂದರ್ಭ ಇದು. ಇಲ್ಲಿ ಭಾಗವಹಿಸುವ ಬಹುತೇಕರಿಗೆ ಕನಿಷ್ಠ ಆಹ್ವಾನ ಪತ್ರಿಕೆಯನ್ನೂ ಪರಿಷತ್ತು ರವಾನಿಸಿರುವು ದಿಲ್ಲ. ಆದರೂ ಲಕ್ಷಾಂತರ ಕನ್ನಡ ಮನಸ್ಸುಗಳು ತಮ್ಮದೇ ಮನೆಯ ಕಾರ್ಯಕ್ರಮವೆಂಬಂತೆ ಸಡಗರದಿಂದ ಭಾಗವಹಿಸುವುದಿಲ್ಲವೇ?

ಕನ್ನಡ ಭಾಷೆಯ ಉಳಿವು- ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಹಿತ್ಯ ಪರಿಚಾರಕರು ಇಂದಿಗೂ ರೈಲು- ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಏರ್ಪಡಿಸಿರುವ ಸ್ಪರ್ಧೆಗಳಲ್ಲಿ ಕನ್ನಡ ಸಂಘಟನೆಗಳವರು ಮುಕ್ತ ಮನಸ್ಸಿನಿಂದ ಭಾಗವಹಿಸಲಿ. ಇದರಲ್ಲಿ ವಿಜೇತರಾದವರಿಗೆ ಜಿಲ್ಲಾಡಳಿತವು ಬಹುಮಾನ ನೀಡಿ, ಸಮ್ಮೇಳನದಲ್ಲಿ ವಿಶೇಷ ಸವಲತ್ತು ಗಳನ್ನು ಒದಗಿಸಿ ಆದರಿಸಿ, ಹುರಿದುಂಬಿಸಲಿ.

- ಡಾ. ಚೆನ್ನು ಅ. ಹಿರೇಮಠ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT