ಸೋಮವಾರ, ಅಕ್ಟೋಬರ್ 26, 2020
28 °C

ಅರ್ಧಸತ್ಯ, ಆಡಂಬರದ ಮಾತು...

ವಾಚಕರವಾಣಿ Updated:

ಅಕ್ಷರ ಗಾತ್ರ : | |

ದೇಶ ಕಟ್ಟುವಿಕೆ ಎಂದರೆ ಇಟ್ಟಿಗೆ, ಸಿಮೆಂಟು ಬಳಸಿ ಸೌಧಗಳನ್ನು ಕಟ್ಟಿದಷ್ಟು ಸುಲಭವಲ್ಲ. ಈ ಪದದ ಒಳಾರ್ಥವನ್ನು ಇಂದಿನ ರಾಜಕೀಯ ಮುಖಂಡರು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ಜನರ ನಂಬಿಕೆ, ವಿಶ್ವಾಸ ದೊರಕಿಸಿಕೊಳ್ಳದ ಹೊರತಾಗಿ ಆ ಕಾರ್ಯ ಸಾಗದು. ಅರ್ಧಸತ್ಯ, ಆಡಂಬರದ ಮಾತುಗಳು ಹಸಿದವನ ಹೊಟ್ಟೆ ತುಂಬಲಾರವು. ನಿರುದ್ಯೋಗಿಗೆ ಉದ್ಯೋಗ ನೀಡಲಾರವು.

ತಮ್ಮಷ್ಟಕ್ಕೆ ತಾವೇ ಟ್ರೆಂಡ್ ಸೃಷ್ಟಿಸಿಕೊಂಡು, ತಮ್ಮ ಪ್ರತೀ ಮಾತನ್ನೂ ಜನ ಒಪ್ಪುತ್ತಾರೆ ಎಂದುಕೊಂಡಿರುವವರು ಅಂತಹ ಮನಃಸ್ಥಿತಿಯಿಂದ ಹೊರಬರುವುದು ಸೂಕ್ತ. ಹಸಿವಿನ ಮುಂದೆ ನೀತಿ ಪಾಠವಾಗಲೀ ಕಥೆಗಳಾಗಲೀ ನಿಲ್ಲವು. ಬೇಕಾಗಿರುವುದು ಅನ್ನ. ಹಾಗೆ ನೋಡಿದರೆ, ಜಗತ್ತಿನಲ್ಲಿ ಕ್ರಾಂತಿಗಳಿಗೆ ಕಾರಣವಾಗಿರುವುದು ಹಸಿವು. ಅದು ಯಾವ ರೂಪದ ಹಸಿವಾದರೂ ಆಗಿರಬಹುದು. ರಾಜಕಾರಣಿಗಳಿಗೆ ಇದರ ಸಂಪೂರ್ಣ ಜ್ಞಾನವಿದ್ದರೆ, ಒಣ ಭಾಷಣ ಮಾಡುವುದನ್ನು ಬಿಟ್ಟು ಜನಮೆಚ್ಚುವ ಕಾರ್ಯ ಮಾಡಲಿ.

ಶ್ವೇತಾ ಎನ್. ಸೊರಬ, ಶಿವಮೊಗ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.