ಭಾನುವಾರ, ಅಕ್ಟೋಬರ್ 25, 2020
22 °C

ಕಾಲು ಶತಮಾನ ಕಳೆದರೂ...

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಬಡವರಿಗೆ ರಿಯಾಯಿತಿ ದರದಲ್ಲಿ ಮನೆ, ನಿವೇಶನ ಒದಗಿಸಲು ಆಶ್ರಯ, ಅಂಬೇಡ್ಕರ್ ಮತ್ತು ಇಂದಿರಾ ಆವಾಸ್ ಯೋಜನೆಗಳ ಅಡಿ 483 ಕೋಟಿ ರೂಪಾಯಿಯ ಯೋಜನೆಯನ್ನು ರಾಜ್ಯ ಸರ್ಕಾರ ಇಪ್ಪತ್ತೈದು ವರ್ಷಗಳ ಹಿಂದೆ ಹಮ್ಮಿಕೊಂಡಿದ್ದ ಸುದ್ದಿಯು ‘25 ವರ್ಷಗಳ ಹಿಂದೆ’ ಅಂಕಣದಲ್ಲಿ (ಪ್ರ.ವಾ., ಸೆ. 27) ಪ್ರಕಟವಾಗಿದೆ.

ಅಷ್ಟು ವರ್ಷಗಳ ಹಿಂದೆಯೇ ಇಷ್ಟು ದೊಡ್ಡ ಮೊತ್ತದ ಹಣವನ್ನು ಬಡವರ ವಸತಿಗಾಗಿ ತೆಗೆದಿಟ್ಟಿದ್ದರೂ ಇನ್ನೂ ಎಲ್ಲ ಬಡವರಿಗೆ ಮನೆ ಇಲ್ಲ. ಕಾಲು ಶತಮಾನ ಕಳೆದರೂ ಇಂತಹ ಸ್ಥಿತಿ ಇದೆ ಎಂದರೆ ಆಡಳಿತ ಎತ್ತ ಸಾಗುತ್ತಿದೆ? ವಸತಿಹೀನರಿಗೆ ತಡಮಾಡದೆ ಸೂರು ದೊರಕಿಸಿಕೊಡುವತ್ತ ಸರ್ಕಾರ ಮನಸ್ಸು ಮಾಡಲಿ. ಇಲ್ಲವಾದರೆ ಇದೇ ಸುದ್ದಿ ಮುಂದೆ ‘ಐವತ್ತು ವರ್ಷಗಳ ಹಿಂದೆ’ ಅಂಕಣದಲ್ಲೂ ಪ್ರಕಟವಾದೀತು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು