ಸಹಾಯವಲ್ಲ, ಸ್ವಾರ್ಥ

7

ಸಹಾಯವಲ್ಲ, ಸ್ವಾರ್ಥ

Published:
Updated:

‘ಭಾರತಕ್ಕೆ ಸಹಾಯಧನ ನೀಡುವ ಅಮೆರಿಕದ ಕ್ರಮವು ಮುಠ್ಠಾಳತನದ್ದು, ಭಾರತವನ್ನು ಅಮೆರಿಕವು ರಕ್ಷಿಸುತ್ತಿದೆ, ಅಮೆರಿಕದ ಅಗಾಧ ಮಿಲಿಟರಿ ವೆಚ್ಚವೆಲ್ಲ ಇತರ ದೇಶಗಳ ರಕ್ಷಣೆಗಾಗಿಯೇ ಹೋಗುತ್ತಿದೆ...’ ಎಂದು ಅಮೆರಿಕದ ‘ಘನತೆವೆತ್ತ’ (ಘನತೆ ಎತ್ತ?) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಸಲಿಗೆ, 17ನೇ ಶತಮಾನದಲ್ಲಿ ಯುರೋಪ್ ರಾಷ್ಟ್ರಗಳಿಂದ ಬಂದು, ಅಂದಿನ ಅಮೆರಿಕದ ಮೂಲನಿವಾಸಿಗಳನ್ನು ಹಿಂಸಿಸಿ, ಕೊಂದು, ಅವರ ನೆಲದಲ್ಲಿ ಬೆಳೆದು, ಆಫ್ರಿಕಾದ ಕರಿಯರನ್ನು ಕರೆತಂದು ಗುಲಾಮರನ್ನಾಗಿಸಿಕೊಂಡು, ಇದುವರೆಗೂ ಪ್ರಪಂಚದ ಬಹುಪಾಲು ದೇಶಗಳನ್ನು ಕುತ್ಸಿತ ಉಪಾಯಗಳಿಂದ ತನ್ನ ಹಂಗಿಗೋ ಬೆದರಿಕೆಯ ಒತ್ತಡಕ್ಕೋ ಒಳಪಡಿಸಿ ದೋಚುತ್ತ ಬಂದಿರುವ ಧೂರ್ತ ರಾಷ್ಟ್ರ ಅಮೆರಿಕ.

ಇಂಥ ರಾಕ್ಷಸೇತಿಹಾಸ ಹೊಂದಿರುವ ಅಮೆರಿಕವು ನಮಗೆ ಇದುವರೆಗೆ ಸಹಾಯಧನ ನೀಡಿದ್ದು ಅದರ ಮುಠ್ಠಾಳತನವಲ್ಲ. ಬದಲಿಗೆ ವ್ಯಾಪಾರ, ವಾಣಿಜ್ಯ, ಮತಾಂತರಗಳ ಲಾಭಕ್ಕಾಗಿ ಆ ದೇಶವು ಅನುಸರಿಸಿದ ಜಾಣತನ ಅದು. ಅಮೆರಿಕವು ಭಾರತವನ್ನು ರಕ್ಷಿಸುತ್ತ ಬಂದಿಲ್ಲ, ಮಿಲಿಟರಿ ಒಪ್ಪಂದಗಳ ಹೆಸರಲ್ಲಿ ಭಕ್ಷಿಸುತ್ತ ಬಂದಿದೆ! ಅಮೆರಿಕದ ಮಿಲಿಟರಿ ವೆಚ್ಚವು ಅನ್ಯ ದೇಶಗಳ ರಕ್ಷಣೆಗಲ್ಲ, ದೇಶ– ದೇಶಗಳ ನಡುವೆ ಒಡಕು, ಶತ್ರುತ್ವ ಹುಟ್ಟಿಸಿ, ಅಶಾಂತಿ ಭುಗಿಲೇಳುವಂತೆ ಮಾಡಿ, ರಕ್ಷಣೆಯ ನೆಪದಲ್ಲಿ ತನ್ನ ಮಿಲಿಟರಿಯನ್ನು, ವಾಣಿಜ್ಯವನ್ನು ಆ ದೇಶಗಳಲ್ಲಿ ಭದ್ರವಾಗಿ ಬೇರೂರಿಸಿ, ಆ ದೇಶಗಳನ್ನು ಶೋಷಿಸಲು ಬಂಡವಾಳ ಹೂಡಿಕೆಯಾಗಿ ವ್ಯಯವಾಗುತ್ತಿದೆ!

ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !