ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಸಂಕಷ್ಟ: ದೇವರ ದುಡ್ಡು ‘ದೇವರಿಗೆ‘ ಕೊಡಿ

Last Updated 23 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ರಾಜ್ಯದ ಹಲವು ಪ್ರದೇಶಗಳು ಪ್ರವಾಹದ ಹೊಡೆತಕ್ಕೆ ಸಿಲುಕಿ ವಿತ್ತ ಹಾನಿ, ಜೀವಹಾನಿ ಅನುಭವಿಸಿವೆ. ದಾನಿಗಳು ಹಾಗೂ ರಾಜ್ಯ ಸರ್ಕಾರ ಕೂಡಿ ಶಕ್ತಿಮೀರಿ ಶ್ರಮಿಸುತ್ತಾ ನೊಂದವರ ಕಣ್ಣೀರು ಒರೆಸುತ್ತಿದ್ದರೂ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಈ ಹಣ ಸಾಲುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳೂ ಜನರ ಕಣ್ಣೀರು ಒರೆಸಲು ಮುಂದೆ ಬರಬೇಕಾಗಿದೆ. ನಮ್ಮ ಜನರು ಭಕ್ತಿಯ ಪರಾಕಾಷ್ಠೆಯಲ್ಲಿ ದೇವಾಲಯದ ಹುಂಡಿಗಳಿಗೆ ಹಾಕುವ ಅಪಾರ ಧನರಾಶಿಯನ್ನು ಸಂತ್ರಸ್ತರಿಗಾಗಿ ಹೊಸ ಮನೆಗಳನ್ನು ಕಟ್ಟಲು, ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು, ಹಾಳಾದ ಸೇತುವೆಗಳನ್ನು ಪುನರ್‌ ನಿರ್ಮಿಸಲು ಬಳಸಿದರೆ ಏನೂ ಕೇಡಿಲ್ಲ. ಜನಸೇವೆಯೇ ಜನಾರ್ದನನ ಸೇವೆ ಎಂಬ ಗಾದೆ ಇದೆ. ಈಗ ಈ ಜೀವಂತ ಜನಾರ್ದನರನ್ನು ಉಳಿಸಿಕೊಳ್ಳಲು ಹುಂಡಿಯ ಹಣವನ್ನು ಬಳಸಬೇಕು.

-ಕೆ.ಬಿ.ಹೊನ್ನಾಯ್ಕ,ಸದಲಗಾ, ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT