ಮಂಗಳವಾರ, ಜೂನ್ 15, 2021
25 °C

ವಕೀಲರ ಭವನ ಸದುಪಯೋಗವಾಗಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿರುವುದರಿಂದ ಅಧೀನ ನ್ಯಾಯಾಲಯಗಳು ವಿಡಿಯೊ ಕಾನ್ಫರೆನ್ಸಿಂಗ್‌ ಮತ್ತು ಆನ್‌ಲೈನ್‌ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವಕೀಲರು ನ್ಯಾಯಾಲಯಕ್ಕೆ ಬರದೆ ತಮ್ಮ ಮನೆ, ಕಚೇರಿಯಿಂದ ವಿಚಾರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೈಕೋರ್ಟ್‌ ಶಾಖೆಗಳಲ್ಲಿ, ವಿಭಾಗ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿರುವ ನ್ಯಾಯಾಲಯಗಳಿಗೆ ಹೊಂದಿಕೊಂಡಂತೆ ವಿಶಾಲವಾದ ಹಾಗೂ ತಾಲ್ಲೂಕು ಮಟ್ಟದಲ್ಲೂ ಸಾಕಷ್ಟು ದೊಡ್ಡದಾದ ವಕೀಲರ ಭವನಗಳಿವೆ. ಕೋವಿಡ್ ಹಾವಳಿ ನಿಲ್ಲುವವರೆಗೂ ರೋಗಿಗಳ ಸೂಕ್ತ ಚಿಕಿತ್ಸೆಗೆ ಅವಕಾಶ ಮಾಡಿಕೊಡಲು ವಕೀಲರ ಭವನಗಳನ್ನು ಒದಗಿಸುವುದು ಮಾನವೀಯತೆಯ ದೃಷ್ಟಿಯಿಂದ ಅವಶ್ಯಕವಾದುದು. ಈ ದಿಸೆಯಲ್ಲಿ ವಕೀಲರ ಪರಿಷತ್ತಿನ ಸದಸ್ಯರು ವಕೀಲರ ಸಂಘಗಳ ಪದಾಧಿಕಾರಿಗಳ ಮನವೊಲಿಸಲು ಮುಂದಾಗಬೇಕು.

– ಬಸವರಾಜ ಹುಡೇದಗಡ್ಡಿ, ಮೈಸೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.