ಶುಕ್ರವಾರ, ಡಿಸೆಂಬರ್ 13, 2019
26 °C

ಮಂಗಗಳಿಗೆ ಬೇಕು ಪರ್ಯಾಯ ವ್ಯವಸ್ಥೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಧಾರ್ಮಿಕ ಸ್ಥಳಗಳು ಹಾಗೂ ದೆಹಲಿಯ ಲ್ಯುಟೆನ್ಸ್‌ ಪ್ರದೇಶದಲ್ಲಿ ಮಂಗಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಸಂಸದೆ ಹೇಮಾಮಾಲಿನಿ ಕಳವಳ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ನ. 22). ಈ ಆತಂಕ ನಮ್ಮ ರಾಜ್ಯಕ್ಕೂ ಅನ್ವ
ಯಿಸುತ್ತದೆ. ಧಾರ್ಮಿಕ ಸ್ಥಳಗಳಲ್ಲಿ ಭಕ್ತರಿಗೆ ತೊಂದರೆ ಕೊಡುವುದು, ರೈತರ ಜಮೀನಿನಲ್ಲಿನ ಬೆಳೆ ನಾಶ, ಮನೆಗಳಿಗೆ ನುಗ್ಗುವುದು... ಹೀಗೆ ಹಲವು ರೀತಿಯಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು ಜನರ ನೆಮ್ಮದಿ ಹಾಳು ಮಾಡುತ್ತಿವೆ. ಅರಣ್ಯ ನಾಶದಿಂದ ಕಾಡಿನಲ್ಲಿ ನೆಲೆ ಇಲ್ಲದೆ ಅವು ಜಮೀನಿನ ಕಡೆ, ಊರಿನತ್ತ ಬರುತ್ತಿವೆ. ಸರ್ಕಾರ ಇನ್ನಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಇವುಗಳ ಹಾವಳಿಯನ್ನು ನಿಯಂತ್ರಿಸಲಿ.

ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು

ಪ್ರತಿಕ್ರಿಯಿಸಿ (+)