ಮಾಧ್ಯಮ: ಲಘು ವಿಚಾರವಲ್ಲ

7

ಮಾಧ್ಯಮ: ಲಘು ವಿಚಾರವಲ್ಲ

Published:
Updated:

‘ಇಂಗ್ಲಿಷ್: ‍ಪ್ರಯೋಗವಾಗಿ ಬರಲಿ ಬಿಡಿ’ (ಪ್ರ.ವಾ., ಜ. 4) ಎಂದಿದ್ದಾರೆ ಎಸ್. ನಟರಾಜ ಬೂದಾಳು. ಯಾವುದೇ ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ಆ ಮಗುವಿನ ತಾಯ್ನುಡಿಯಲ್ಲೇ ನೀಡಬೇಕೆಂಬ ತತ್ತ್ವವು ಪ್ರಯೋಗ, ಪರೀಕ್ಷೆ, ಫಲಿತಾಂಶದಿಂದ ಎಂದೋ ಸಾಬೀತಾಗಿದೆ.

ಈ ತತ್ತ್ವವನ್ನು ಪ್ರಪಂಚದ ಎಲ್ಲಾ ದೇಶಗಳ ಶಿಕ್ಷಣ ತಜ್ಞರು ಹಾಗೂ ಮಕ್ಕಳ ಮನೋವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಹೀಗಿದ್ದೂ ಶಿಕ್ಷಣದಂಥ ಮಹತ್ವದ ವಿಷಯವನ್ನು ಇಷ್ಟೊಂದು ಲಘುವಾಗಿ ಪರಿಗಣಿಸುವುದು ಸಲ್ಲದು.

ಇಂಗ್ಲಿಷ್ ಹೇರಿಕೆಯಿಂದ ಮಗುವಿನ ಮೇಲಾಗುವ ಬೌದ್ಧಿಕ ಒತ್ತಡ ಏನೆಂದು ನಾವು ಅರಿಯಬೇಕಾಗಿದೆ. ಮಗುವಿನ ಸುಂದರ ಬಾಲ್ಯ ನಲುಗಿ ಹೋಗಬಾರದು. ಎಲ್ಲಕ್ಕೂ ಮಿಗಿಲಾಗಿ ಶಿಕ್ಷಣದ ಸಾರ್ಥಕತೆಯನ್ನು ನಾವು ಗಮನಿಸಬೇಕಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !