ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋಯಿತು ‘ಕಣಜ’?

ಅಕ್ಷರ ಗಾತ್ರ

ಜ್ಞಾನಸಮಾಜ ಸೃಷ್ಟಿಯನ್ನು ಮುಖ್ಯ ಉದ್ದೇಶವಾಗಿ ಇಟ್ಟುಕೊಂಡು ಕರ್ನಾಟಕ ಜ್ಞಾನ ಆಯೋಗದ ಸಲಹೆಯಂತೆ ಕರ್ನಾಟಕ ಸರ್ಕಾರವು ‘ಕಣಜ’ ಎಂಬ ಕನ್ನಡ ಅಂತರ್ಜಾಲ ಜ್ಞಾನಕೋಶವನ್ನು 2009ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿತು. ಇದು ಕನ್ನಡದಲ್ಲಿ ಬಹುದೊಡ್ಡ ಮಾಹಿತಿಯ ಆಕರವಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿತ್ತು. ಬೇರೆ ಬೇರೆ ಆಕರಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಈ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿತ್ತು. ಇಲ್ಲಿ ಪಠ್ಯ ಮಾತ್ರವಲ್ಲದೆ, ಧ್ವನಿ ಮತ್ತು ಚಲನಚಿತ್ರದ ತುಣುಕುಗಳು, ಹಲವು ಲೇಖಕರ ಪುಸ್ತಕಗಳು ಇದ್ದವು. ಇಲ್ಲಿಯ ಮಾಹಿತಿಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದವು. ಅನೇಕ ವಿದ್ಯಾರ್ಥಿಗಳು, ಸಂಶೋಧಕರು, ಲೇಖಕರು, ವಿದ್ವಾಂಸರು ಇಲ್ಲಿಯ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ಕಣಜವು ಸರಿಯಾಗಿ ತೆರೆದುಕೊಳ್ಳುತ್ತಿಲ್ಲ. ಇದರಿಂದ ಅನೇಕರು ಮಾಹಿತಿಗಳಿಗಾಗಿ ಪರದಾಡುವಂತಾಗಿದೆ. ಯಾಕೆ ಹೀಗಾಗಿದೆ? ಈ ಜಾಲತಾಣದ ಹೊಣೆ ಹೊತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೂಡಲೇ ಕಾರ್ಯಪ್ರವೃತ್ತವಾಗಿ ಇದನ್ನು ಸರಿಪಡಿಸಬೇಕು.

- ಶ್ರೀಧರ ಬಿ.ನಾಯಕ, ಬೇಲೇಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT