ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಧಿಕಾರ ಕೊಟ್ಟವರ ಸಂಕಷ್ಟಕ್ಕೆ ಮಿಡಿಯಲಿ

Last Updated 27 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ದೇಶದಲ್ಲಿ ಕೋವಿಡ್‌– 19 ಎರಡನೇ ಅಲೆ ಇಷ್ಟೊಂದು ವೇಗವಾಗಿ ಹಬ್ಬಲು ಚುನಾವಣಾ ಆಯೋಗವೇ ಕಾರಣ, ರ‍್ಯಾಲಿ ಮತ್ತು ಸಭೆಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವ ಮೂಲಕ ಸೋಂಕು ಹರಡಲು ಆಯೋಗ ಕಾರಣವಾಯಿತು’ ಎಂದು ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿರುವುದು (ಪ್ರ.ವಾ., ಏ. 27) ಒಂದು ರೀತಿಯ ಸಮಾಧಾನ ತಂದಿದೆ. ಚುನಾವಣಾ ಪ್ರಚಾರಕ್ಕೆ ಯಾವ ಅಳುಕಿಲ್ಲದೆ ಅವಕಾಶ ಮಾಡಿಕೊಟ್ಟಿರುವ ಆಯೋಗವು ಆಳುವ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿದೆ.

ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳಲ್ಲಿ ಕೋವಿಡ್‌ ತಡೆಗೆ ಸಂಬಂಧಿಸಿದ ಯಾವ ಮಾರ್ಗಸೂಚಿಯನ್ನೂಪಾಲಿಸದೆ ಎಲ್ಲ ಪಕ್ಷಗಳು ಪ್ರಚಾರ ನಡೆಸಿದವು. ಅತ್ಯಂತ ನಿರ್ಲಕ್ಷ್ಯದಿಂದ ನಡೆದುಕೊಂಡವು. ರಾಜಕಾರಣಿಗಳು ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಿದ್ದಿದ್ದರೆ ಇಷ್ಟೊಂದು ಸಾವುಗಳು ಸಂಭವಿಸುತ್ತಿರಲಿಲ್ಲ. ನೊಂದವರ ನೋವು ಅನುಭವಿಸಿದವರಿಗೇ ಗೊತ್ತು. ಜನರ ಸಂಕಷ್ಟಕ್ಕೆ ಮಿಡಿಯದ ಜನಪ್ರತಿನಿಧಿಗಳು ಇದ್ದರೂ ಇಲ್ಲದಂತೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಹೋದ ಜೀವ ಮತ್ತೆ ಬರುವುದಿಲ್ಲ. ಜನರು ಕೊಟ್ಟ ಅಧಿಕಾರದ ಋಣಕ್ಕಾದರೂ ಅಧಿಕಾರಸ್ಥರು ಜನರಿಗಾಗಿ ಮಿಡಿಯಬೇಕಾಗಿದೆ.

-ಡಾ. ಶಿವರಾಜ್ ಬ್ಯಾಡರಹಳ್ಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT