ನಾಲಿಗೆಗೆ ನಿಯಂತ್ರಣ ಅಗತ್ಯ

7

ನಾಲಿಗೆಗೆ ನಿಯಂತ್ರಣ ಅಗತ್ಯ

Published:
Updated:

ನಮ್ಮ ಕ್ರಿಕೆಟ್‌ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರು ಮಹಿಳೆಯರ ಬಗ್ಗೆ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಕೇವಲವಾಗಿ ಮಾತನಾಡಿದ್ದು ವರದಿಯಾಗಿದೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿರುವುದು ಸಹಜ.

ಕ್ರೀಡೆ ಯಾವುದೇ ಇರಲಿ, ಒಂದು ದೇಶವನ್ನು ಪ್ರತಿನಿಧಿಸುವ ಆಟಗಾರರು ತಮ್ಮ ದೇಶದ ಆಚಾರ- ವಿಚಾರ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅರಿತು ವರ್ತಿಸಬೇಕು. ಇದನ್ನು ಮರೆತು ನಾಲಿಗೆಯನ್ನು ಹರಿಬಿಟ್ಟ ಈ ಇಬ್ಬರು ಆಟಗಾರರ ವಿರುದ್ಧ ಬಿಸಿಸಿಐ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು.

ಜೊತೆಗೆ ಕ್ರೀಡಾಂಗಣದ ಹೊರಗೆ ನಡೆ- ನುಡಿಗಳು ಹೇಗಿರಬೇಕು ಎಂಬ ಬಗ್ಗೆ ಯುವ ಆಟಗಾರರಿಗೆ ತರಬೇತಿ ನೀಡುವುದು ಸೂಕ್ತವೆನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !