ಭಾನುವಾರ, ಫೆಬ್ರವರಿ 23, 2020
19 °C

ಸಮಾಜದ ಆರೋಗ್ಯ ಕೆಡಿಸುವ ಮಧ್ಯಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜದ ಅಭಿವೃದ್ಧಿಯಲ್ಲಿ ಸ್ವಾಮಿಗಳು ಮತ್ತು ಮಠಗಳ ಪಾತ್ರ ಬಹಳ ಮುಖ್ಯ. ಅವರು ತಾತ್ವಿಕ ಚಿಂತಕರು, ಬೌದ್ಧಿಕವಾಗಿ ಪ್ರಬುದ್ಧರು, ಮಾನವೀಯ ನೆಲೆಯಲ್ಲಿ ಸಮಾಜೋದ್ಧಾರದ ಪ್ರತಿಪಾದಕರು. ಸಮಾಜ ತಪ್ಪು ಹಾದಿಯಲ್ಲಿ ಸಾಗಿದಾಗ ಅವರು ಅದನ್ನು ತಿದ್ದುವ ಪ್ರಯತ್ನ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ರಾಜಕೀಯದ ಸಂಗತಿಗಳಲ್ಲಿ ಸ್ವಾಮಿಗಳು ಅತಿಯಾಗಿ ಮಧ್ಯಪ್ರವೇಶಿಸುತ್ತಿರುವುದು ಸಮಾಜದ ಆರೋಗ್ಯವನ್ನು ಕೆಡಿಸುತ್ತದೆ. ಅವರು ಮುಖ್ಯಮಂತ್ರಿಗೆ ಒಳ್ಳೆಯ ಸಲಹೆ ನೀಡಲಿ ಅಥವಾ ಸಮಾಜದ ಹಿತದೃಷ್ಟಿಯಿಂದ ಬೇಡಿಕೆಗಳು ಇದ್ದರೆ ಅವನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದು ಸರಿಪಡಿಸಲು ಪ್ರಯತ್ನಿಸಬಹುದು. ಆದರೆ ‘ನಮ್ಮ ಜಾತಿಗೆ ನೀವು ಋಣಿಯಾಗಬೇಕು, ನಮ್ಮ ಜಾತಿಯವರನ್ನು ಮಂತ್ರಿ ಮಾಡದಿದ್ದರೆ ಇಡೀ ಸಮಾಜ ನಿಮ್ಮನ್ನು ಕೈಬಿಡುತ್ತದೆ’ ಎಂದೆಲ್ಲ ಒತ್ತಡ ಹೇರುವುದು ಎಷ್ಟು ಸರಿ?

-ಡಾ. ಜಿ.ಎಂ.ಮಂಜುನಾಥ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)