ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣ

ಅಕ್ಷರ ಗಾತ್ರ

ಕರ್ನಾಟಕದಲ್ಲಿನ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ಎಂಬುದು ಆಡುನುಡಿಗಷ್ಟೇ ಸೀಮತವಾದಂತೆ ಕಾಣುತ್ತಿದೆ. ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಮೊದಲಿಗೆ ಉಪಚುನಾವಣೆಯು ಅವಶ್ಯಕತೆಯೇ ಇರಲಿಲ್ಲ. ನಾಲ್ಕೋ ಐದೋ ತಿಂಗಳ ಅವಧಿಗೆ ಇಷ್ಟೆಲ್ಲ ಕಸರತ್ತು, ವೆಚ್ಚದ ಅಗತ್ಯ ಇತ್ತೇ ಎಂಬ ಪ್ರಶ್ನೆ ಏಳುತ್ತದೆ.

ಅತ್ತ ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣಕ್ಕೆ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಇಳಿದಿದ್ದಾರೆ. ಇತ್ತ ರಾಮನಗರದಲ್ಲಿ ದೇವೇಗೌಡರ ಕುಂಟುಬದ್ದೇ ಪಾರುಪಾತ್ಯ. ಇವೆಲ್ಲವನ್ನೂ ಗಮನಿಸಿದರೆ ಇದೇನು ಪ್ರಜಾಪ್ರಭುತ್ವವೋ, ಕುಟುಂಬ ಪ್ರಭುತ್ವವೋ ಎಂಬ ಪ್ರಶ್ನೆ ಕಾಡದೇ ಇರದು. ಸ್ಪರ್ಧಾಳುಗಳ ರಾಜಕೀಯ ಹಿನ್ನೆಲೆಗಿಂತ ಕ್ಷೇತ್ರದ ಜನರೊಂದಿಗೆ ಅವರು ಒಡನಾಡುವ ಪರಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅವರು ಹೊಂದಿರುವ ದೂರದೃಷ್ಟಿ ಮತ್ತು ಬದ್ಧತೆಯನ್ನು ನೋಡಿ ಜನರು ಮತ ನೀಡಬೇಕಾಗಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನೂ ಉಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT